ಸಿ ಎಂ ಎಸ್ ಟ್ರೇಡರ್ಸ್ ಮಾಲಕರಾದ ಹಾಜಿ CMS ಅಬ್ದುಲ್ಲ ಅವರಿಗೆ ಸನ್ಮಾನ…

ಸುಳ್ಯ: ಗಾಂಧಿನಗರ ಆಲೆಟ್ಟಿ ಕ್ರಾಸ್ ನಲ್ಲಿ ಇಂದು ಪ್ರಾರಂಭಗೊಂಡ ಸಿ ಎಂ ಎಸ್ ಟ್ರೇಡರ್ಸ್ ಅಡಿಕೆ, ಕರಿಮೆಣಸು, ಖರೀದಿ ಕೇಂದ್ರದ ಮಾಲಕರಾದ ಹಾಜಿ CMS ಅಬ್ದುಲ್ಲ ರವರನ್ನು ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಹಿರಿಯರು ಸ್ಥಾಪಿಸಿದ ಈ ಸಂಸ್ಥೆ 70 ವರ್ಷ ಪೂರೈಸಿ ಸ್ಥಳಾOತರಗೊಂಡ ಶುಭ ಸಂದರ್ಭದಲ್ಲಿ ಈ ಗೌರವಾರ್ಪಣೆ ನಡೆಯಿತು.
ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೆಕ್ಕಾರ್ಸ್, ಎಪಿಎಂಸಿ ಕಾರ್ಯದರ್ಶಿ ಅರವಿಂದ ಮುದ್ದು ಕೃಷ್ಣ, ಸತ್ತಾರ್ ಮಾಮಿಚ ಮೊದಲಾದವರು ಉಪಸ್ಥಿತರಿದ್ದರು.