ಕಲ್ಲಿಕೋಟೆ ವಿಶ್ವ ವಿದ್ಯಾಲಯ – ಸಿ ಎಚ್ ಮೊಹಮದ್ ಕೋಯಾ ಪೀಠದ ವತಿಯಿಂದ ವಿಚಾರಗೋಷ್ಠಿ…
ಕ್ಯಾಲಿಕಟ್ :ಕೇರಳದ ಮಾಜಿ ಮುಖ್ಯಮತ್ರಿ ಸಿ ಎಚ್ ಮೊಹಮದ್ ಕೋಯಾ ಅವರ ಹೆಸರಿನಲ್ಲಿ ಕಲ್ಲಿಕೋಟೆ ವಿಶ್ವ ವಿದ್ಯಾಲಯದಲ್ಲಿರುವ ಸಿ ಎಚ್ ಮೊಹಮದ್ ಕೋಯಾ ಪೀಠದ ವತಿಯಿಂದ ಎರಡು ದಿನಗಳ ಕಾಲ ನಡೆದ ವಿಚಾರಗೋಷ್ಠಿಯಲ್ಲಿ ”ಭಾರತದ ಒಕ್ಕೂಟ ವ್ಯವಸ್ಥೆಯ ಅಪಾಯಸ್ಥಿತಿ” ಎಂಬ ವಿಷಯದಲ್ಲಿ ಮಾತನಾಡಿದ ಸಮಾಜವಾದಿ ಪಕ್ಷದ ವಕ್ತಾರ ಘನಶ್ಯಾಮ್ ತಿವಾರಿ ಹಾಗು “ತಪ್ಪು ಮಾಹಿತಿ ಮತ್ತು ಪ್ರಜಾಪ್ರಭುತ್ವ” ಬಗ್ಗೆ ಮಾತನಾಡಿದ ಖ್ಯಾತ ನ್ಯಾಯವಾದಿ ಹಾಗೂ ಪತ್ರಕರ್ತ ಆಶೀಶ್ ಖೇತನ್ ಅವರಿಗೆ ಕರ್ನಾಟಕ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಅವರು ಸ್ಮರಣಿಕೆ ನೀಡಿದರು.
ಈ ಸಂದರ್ಭದಲ್ಲಿ ಸಿ ಎಚ್ ಅವರ ಪುತ್ರ ಮಾಜಿ ಸಚಿವ ಡಾಕ್ಟರ್ ಎಂ ಕೆ ಮುನೀರ್ ಎಂ ಎಲ್ ಎ, ಅಧ್ಯಕ್ಷರಾದ ಸಿ ಕೆ ಝುಬೈರ್ ಮತ್ತು ನ್ಯಾಯವಾದಿ ಫಾತಿಮ ತಹಲಿಯ ಉಪಸ್ಥಿತರಿದ್ದರು.
ಎರಡು ದಿನ ನಡೆದ ವಿಚಾರಗೋಷ್ಠಿಯಲ್ಲಿ ಸಂಸತ್ ಸದಸ್ಯರುಗಳಾದ ಅಬ್ದುಲ್ ಸಮದ್ ಸಮದಾನಿ, ಎಂ ಕೆ ರಾಘವನ್, ಇ ಟಿ ಮೊಹಮದ್ ಭಶೀರ್, ವಿರೋಧ ಪಕ್ಷದ ನಾಯಕರಾದ ವಿ ಡಿ ಸತೀಷನ್, ಪಾಣಕ್ಕಾಡ್ ಸಯ್ಯದ್ ಸಾದಿಕ್ ಅಲಿ ಶಿಹಾಬ್ ತಂಘಲ್ ಮೊದಲಾದವರು ಭಾಗವಹಿಸಿದರು.