ಸುಳ್ಯ ಗಾಂಧಿನಗರ ಮದ್ರಸ ವತಿಯಿಂದ ಸಂಭ್ರಮದ 77 ನೇ ಗಣರಾಜ್ಯೋತ್ಸವ…
ಸಹೋದರತೆ ಮತ್ತು ಮಾನವೀಯತೆ ಯಿಂದ ರಾಷ್ಟ್ರದ ಸಂವಿಧಾನ ಸೌಂದರ್ಯ ವೃದ್ಧಿ - ಸಿರಾಜುದ್ದೀನ್ ಸಖಾಫಿ...
ಸುಳ್ಯ: ಗಾಂಧಿನಗರ ತರ್ಬಿಯತುಲ್ ಇಸ್ಲಾಂ ಜಮಾಅತ್ ಕಮಿಟಿ ಮತ್ತು ಮುನವ್ವಿರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ವತಿಯಿಂದ 77 ನೇ ಗಣ ರಾಜ್ಯೋತ್ಸವ ವಿಜೃಂಭಣೆ ಯಿಂದ ಆಚರಿಸಲಾಯಿತು.
ಮುಹಿಯ್ಯದ್ದೀನ್ ಜುಮ್ಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಕೆಎಂಎಸ್ ಮಹಮ್ಮದ್ ಧ್ವಜಾರೋಹಣಗೈದರು.
ಗಾಂಧಿನಗರ ಮದ್ರಸ ಮುಖ್ಯ ಶಿಕ್ಷಕರಾದ ಸಿರಾಜುದ್ದೀನ್ ಸಖಾಫಿ ಉದ್ಘಾಟನೆ ಮಾಡಿ ಮಾತನಾಡಿ ಮಾನವೀಯತೆಯ ಗುಣಗಳು ಜೀವನದಲ್ಲಿ ಅಳವಡಿಸಿ ಸಹೋದರತೆ ಮತ್ತು ಸಾಮಾರಸ್ಯಕ್ಕೆ ಒತ್ತು ಕೊಟ್ಟಾಗ ದೇಶದ ಅಭಿವೃದ್ಧಿ ಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದರು.
ಎಂಜೆಎಂ ಮಾಜಿ ಅಧ್ಯಕ್ಷ ಕೆ. ಎಂ. ಮುಸ್ತಫ ಸಂದೇಶ ಭಾಷಣ ಮಾಡಿದರು.
ಮುಅಲ್ಲಿ0 ಇರ್ಫಾನ್ ಹಿಮಮಿ ರೆಂಜ ಸ್ವಾಗತಿಸಿದರು. ರಿಯಾನ್ ಸಅದಿ ಪ್ರಾಸ್ತವಿಕವಾಗಿ ಮಾತನಾಡಿದರು.
ಎಂ ಜೆ ಎಂ ಉಪಾಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ, ಪ್ರದಾನ ಕಾರ್ಯದರ್ಶಿ ಹಾಜಿ ಐ. ಇಸ್ಮಾಯಿಲ್,ಕೋಶಾಧಿಕಾರಿ ಹಾಜಿ ಎಸ್. ಎಂ. ಅಬ್ದುಲ್ ಹಮೀದ್, ನಿರ್ದೇಶಕರುಗಳಾದ ಅಬೂಬಕ್ಕರ್ ಸಿದ್ದೀಕ್, ಕೆ. ಎಂ. ಮುಹಿಯ್ಯದ್ದೀನ್ ಫ್ಯಾನ್ಸಿ,ಮದ್ರಸ ಶಿಕ್ಷಕರುಗಳಾದ ಇರ್ಫಾನ್ ಜೋಗಿಬೆಟ್ಟು, ಹಸೈನಾರ್ ಮದನಿ ಕುಂಜಿಲ, ಹನೀಫ್ ಸಖಾಫಿ ಬೆಳ್ಳಾರೆ, ಉಬೈದ್ ಸಆದಿ ಬನ್ನೂರ್ ಮೊದಲಾದವರು ಉಪಸ್ಥಿತರಿದ್ದರು.






