ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ 77 ನೇ ಗಣರಾಜ್ಯೋತ್ಸವ…
ಸುಳ್ಯ: ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ವತಿಯಿಂದ 77 ನೇ ಗಣರಾಜ್ಯೋತ್ಸವ ಸಡಗರ, ಸಂಭ್ರಮದಿಂದ ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಶಾಲಾ ಸಂಚಾಲಕ, ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ಧ್ವಜಾ ರೋಹಣಗೈದರು.
ಅಧ್ಯಕ್ಷತೆಯನ್ನು ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ ವಹಿಸಿದ್ದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ, ಸಂಯೋಜಕ ಶಾಫಿ ಕುತ್ತಾಮೊಟ್ಟೆ, ನಿರ್ದೇಶಕ ಎಸ್. ಎಂ. ಅಬ್ದುಲ್ ಹಮೀದ್, ಮುಖ್ಯಶಿಕ್ಷಕ ಇಲ್ಯಾಸ್ ಕಾಶಿಪಟ್ಟಣ ಪಿ ಟಿ ಎ ಸಮಿತಿಯ ಎನ್. ಎ. ಅಬ್ದುಲ್ಲಾ ನಾವೂರು, ಎಸ್. ಪಿ ಅಬೂಬಕ್ಕರ್, ಮುಹಿಯ್ಯದ್ದೀನ್ ಫ್ಯಾನ್ಸಿ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕಿ ಜಯಂತಿ ಸ್ವಾಗತಿಸಿ, ಶಿಕ್ಷಕ ರಂಜಿತ್ ವಂದಿಸಿದರು.




