ಬಿ ಸಿ ರೋಡ್ -ಸೇವಾ ಜಾಗರಣದ ಅಶ್ರಯದಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ  ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ…

ರಕ್ತದಾನ ಪುಣ್ಯದ ಕಾರ್ಯ, ರೋಗಗಳು ದೂರ: ಸತ್ಯಜಿತ್ ಸುರತ್ಕಲ್...

ಬಂಟ್ವಾಳ :ರಕ್ತದಾನದಿಂದ ರಕ್ತ ಕೊಟ್ಟವನಿಗೂ ತೆಗೆದುಕೊಂಡವನಿಗೂ ಪುಣ್ಯ ಸಿಗುತ್ತದೆ, ರಕ್ತದಾನದಿಂದ ರೋಗಗಳು ದೂರವಾಗಿ ಅರೋಗ್ಯವಂತರಾಗುತ್ತಾರೆ, ಇಂತಹ ಅನೇಕ ಪುಣ್ಯ ಕಾರ್ಯ ಮಾಡುವುದರ ಮೂಲಕ ಸೇವಾ ಜಾಗರಣ ಆಶಕ್ತರ, ಬಡವರ ಕಷ್ಟಗಳಿಗೆ ಸ್ಪಂದಿಸಿ ದುರ್ಬಲರಿಗೆ ಆಶ್ರಯವಾಗಿ ಮೂಡಿಬರುತ್ತಿದೆ ಎಂದು ಹಿಂದೂ ಮುಖಂಡರಾದ ಸತ್ಯಜಿತ್ ಸುರತ್ಕಲ್ ಹೇಳಿದರು.

ಅವರು ಸೇವಾ ಜಾಗರಣ ಇದರ ಆಶ್ರಯದಲ್ಲಿ ಕೆ.ಎಂ.ಸಿ. ಆಸ್ಪತ್ರೆ ಹಾಗೂ ಎ.ಜೆ.ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ಮಾ.01ನೇ ಆದಿತ್ಯವಾರ ಬಿ.ಸಿ.ರೋಡ್‌ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ರಕ್ತದಾನ ಶಿಬಿರ ಹಾಗೂ ಉಚಿತ ನೇತ್ರ, ದಂತ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿ ಅರ್ಜುನ್ ಭಂಡಾರ್ಕರ್ ಮಾತನಾಡಿ,ರೋಗ್ಯವಿದ್ದರೆ ಮಾತ್ರ ರಕ್ತದಾನ ಮಾಡುವ ಭಾಗ್ಯ ಸಿಗುತ್ತದೆ, ಸೇವಾ ಜಾಗರಣದ ಸೇವಾ ಕಾರ್ಯ ಸಮಾಜಕ್ಕೆ ಮಾದರಿಯಾಗಿದ್ದು ಮುಂದಿನ ದಿನಗಳಲ್ಲಿ ನಾವು ನಿಮ್ಮ ಜೊತೆ ಕೈ ಜೋಡಿಸುತ್ತೇವೆ ಎಂದರು.

ಕೆ.ಎಂ.ಸಿ. ಆಸ್ಪತ್ರೆಯ ಡಾ ವೈಭವ ರಕ್ತದಾನದ ಮಹತ್ವ ಹಾಗೂ ಅಗತ್ಯತೆಯ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು, ನಿವೃತ್ತ ಸೈನಿಕ ವಿಜಯನ್,ಹಿಂದೂ ಮುಖಂಡ ರತ್ನಕರ ಶೆಟ್ಟಿ ವೃತ್ತ ಸೈನಿಕ ಡಿಕೆಶ್,ರಾಯಿ ವಿವೇಕಾನಂದ ಟ್ರಸ್ಟ್ ನ ಮಧುಕರ ಬಂಗೇರ, ವಿ ಹಿಂ ಪ ಗುರುಪುರ ಪ್ರಖಂಡದ ವಿಶ್ವನಾಥ ಪಾಕಜೆ, ಎ.ಜೆ.ಆಸ್ಪತ್ರೆಯ ಡಾ ಶಿಲ್ಪಾ,ನಿವೃತ್ತ ಸೈನಿಕ ಡಿಕೆಶ್ ಮುಂಡಾಜೆ ಸೇವಾ ಜಾಗರಣದ ಪ್ರಮುಖರಾದ ಜಗದೀಶ ಬಂಗೇರ ಹೊಳ್ಳರಬೈಲು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಪಘಾತ ವಿಮೆ ಹಾಗೂ ಆರೋಗ್ಯವಿಮೆ ಮತ್ತು ಮಾಹಿತಿ ಕಾರ್ಯಗಾರ, ಸಿ.ಪಿ.ಓ.ವಿಜಯನ್ (ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿ)ಇವರಿಂದ ಸೈನ್ಯಕ್ಕೆ ಸೇರುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ ನಡೆಯಿತು.

ಸುಮಾರು 82 ಜನ ರಕ್ತದಾನ,150ಜನ ಅರೋಗ್ಯ ತಪಾಸಣೆ ಮಾಡಿದರು ಹಾಗೂ 42 ಜನರಿಗೆ ಉಚಿತ ಕನ್ನಡಕ ವಿತರಿಸಲಾಯಿತು.

ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ, ಪ್ರಮುಖರಾದ ನಾರಾಯಣ ಹೊಳ್ಳ ನೆತ್ತರಕೆರೆಗುತ್ತು, ಸುದರ್ಶನ್ ಬಜ, ವೀರೇಂದ್ರ ಅಮೀನ್ ವಗ್ಗ, ಗಣೇಶ್ ಸುವರ್ಣ ತುಂಬೆ, ನರಸಿಂಹ ಮಾಣಿ, ತಿರುಲೇಶ್ ಬೆಳ್ಳೂರ್ ಭೇಟಿ ನೀಡಿ ಶುಭ ಹಾರೈಸಿದರು.

ಸುಶಾನ್ ಆಚಾರ್ಯ ಬೊಳ್ಳಾರಿ ಸ್ವಾಗತಿಸಿ, ಗಣೇಶ್ ಹೊಳ್ಳರಬೈಲು ವಯಕ್ತಿಕ ಗೀತೆ ಹಾಡಿದರು ಜಗದೀಶ ಕಡೆಗೋಳಿ ಧನ್ಯವಾದವಿತ್ತು ಕಾರ್ಯಕ್ರಮ ನಿರೂಪಿಸಿದರು, ಯೋಗೀಶ್ ಕುಮ್ದೇಲ್ ಸಹಕರಿಸಿದರು.

whatsapp image 2026 03 02 at 9.03.47 am

Related Articles

Back to top button