ತೆಕ್ಕಿಲ್ ಪ್ರತಿಷ್ಠಾನ ವತಿಯಿಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ರವರಿಗೆ ಸನ್ಮಾನ…

ಸುಳ್ಯ: ಕರ್ನಾಟಕ ಸರಕಾರದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ರವರು ಅರಂತೋಡು ತೆಕ್ಕಿಲ್ ಗ್ರಾಮೀಣಾವೃದ್ಧಿ ಪ್ರತಿಷ್ಠಾನಕ್ಕೆ ಭೇಟಿ ನೀಡಿದಾಗ ಅವರನ್ನು ಪ್ರತಿಷ್ಠಾನ ವತಿಯಿಂದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ರವರು ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು.
ಟಿ ಎಂ ಶಾಹಿದ್ ತೆಕ್ಕಿಲ್ ಅವರ ಗ್ರಾಮೀಣ ಪ್ರದೇಶ ಗೂನಡ್ಕದಲ್ಲಿ ಶಾಲೆ, ವೈಯುಕ್ತಿಕ ಸಾಧನೆಗಳನ್ನು, ಸನ್ಮಾನ ಪತ್ರಗಳನ್ನು, ಸ್ಮರಣಿಕೆಗಳನ್ನು, ಪ್ರಶಸ್ತಿ ಪತ್ರ ವೀಕ್ಷಿಸಿ ಗ್ರಾಮೀಣ ಪ್ರದೇಶದಲ್ಲಿ ಮಾಡಿದ ಗಣನೀಯ ಸಾಧನೆ ಬಗ್ಗೆ ಸಂತಸ ಹಂಚಿಕೊಂಡರು.
ಈ ಸಂಧರ್ಭದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ, ಕೋಶಾಧಿಕಾರಿ ಟಿ.ಎಂ ಜಾವೇದ್ ತೆಕ್ಕಿಲ್, ಸುಳ್ಯ ತಾಲೂಕು ಅಲ್ಪ ಸಂಖ್ಯಾತರ ಸಹಕಾರ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ಉಪಾಧ್ಯಕ್ಷ ಎಸ್.ಕೆ ಹನೀಫ್ ಸಂಪಾಜೆ, ಸುಳ್ಯ ನಗರ ಪಂಚಾಯತ್ ಸದಸ್ಯರಾದ ಕೆ.ಎಸ್ ಉಮ್ಮರ್, ಶರೀಫ್ ಕಂಠಿ, ಸಿದ್ಧೀಕ್ ಕೊಕ್ಕೊ, ಉಧ್ಯಮಿ ಸಲೀಂ ಪೆರಂಗೋಡಿ, ಪತ್ರಕರ್ತ ರಶೀದ್ ಜಟ್ಟಿಪಳ್ಳ, ಕಲ್ಲುಗುಂಡಿ ಜುಮಾ ಮಸೀದಿ ಅಧ್ಯಕ್ಷ ಆಲಿಹಾಜಿ ತಾಜುದ್ಧೀನ್ ಅರಂತೋಡು, ಇಕ್ಬಾಲ್ ಸುಣ್ಣಮೂಲೆ ಮೊದಲಾದವರು ಉಪಸ್ಥಿತರಿದ್ದರು.ಸಂಪಾಜೆ, ಅರಂತೋಡು ಎಲಿಮಲೆ ರಸ್ತೆ, ಮತ್ತು ಸುಳ್ಯದ ಹಲವಾರು ಬೇಡಿಕೆಗಳನ್ನು ಸಚಿವರ ಮುಂದಿಟ್ಟು ಹೆಚ್ಚು ಅನುದಾನಕ್ಕೆ ವಿನಂತಿಸಿದರು.

whatsapp image 2025 02 17 at 11.52.28 am

Sponsors

Related Articles

Back to top button