ನಿವೃತ್ತ ಶಿಕ್ಷಕಿ ಕಮಲಾಕ್ಷಿ ವಿ. ಶೆಟ್ಟಿ ನಿಧನ…
ಸುಳ್ಯ: ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಕಮಲಾಕ್ಷಿ ವಿ. ಶೆಟ್ಟಿ(80) ಅವರು ಇಂದು ಮುಂಜಾನೆ ನಿಧನರಾದರು. ಅವರು ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದರು.
ಕಮಲಾಕ್ಷಿ ವಿ. ಶೆಟ್ಟಿ ಅವರು ರಾಜ್ಯ ಶಿಕ್ಷಕ ಪ್ರಶಸ್ತಿಯನ್ನು ಪಡೆದ ಶಿಕ್ಷಕಿಯಾಗಿದ್ದರು. ಅಪಾರ ಶಿಷ್ಯ ರನ್ನು ಹೊಂದಿರುವ ಅವರು ತಮ್ಮ ಸೇವಾ ಜೀವನದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮಹತ್ವಪೂರ್ಣ ಕೊಡುಗೆ ನೀಡಿದ್ದರು.
ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿಯ ತಮ್ಮ ಮನೆಯಲ್ಲಿ ವಾಸವಿದ್ದ ಅವರನ್ನು ತೀವ್ರ ಅಸ್ವಸ್ಥತೆಯ ಕಾರಣದಿಂದ ಆಸ್ಪತ್ರೆಗೆ ತಂದು ದಾಖಲಿಸಿದ ಬಳಿಕ, ಇಂದು ಮುಂಜಾನೆ ನಿಧನರಾದರು.
ಅಂತಿಮ ದರ್ಶನಕ್ಕಾಗಿ ಮೃತದೇಹವನ್ನು ಅವರ ನಿವಾಸಕ್ಕೆ ತರಲಾಗಿದೆ ಮತ್ತು ಸಂಜೆ 4 ಗಂಟೆಯವರೆಗೆ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.







