ತಾಲೂಕು ಪಿಂಚಣಿದಾರರ ಸಂಘದ ಮಹಾಸಭೆ…
ನಿವೃತ್ತರು ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಿ ಆರೋಗ್ಯವಂತರಾಗಿರಿ-ರಾಜಗೋಪಾಲ...
ಬಂಟ್ವಾಳ ಜ. 7 :ಪಿಂಚಣಿದಾರರ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಚಾರ ವಿನಿಮಯ ಮಾಡಿಕೊಂಡರೆ ನಿವೃತ್ತರು ಕ್ರೀಯಶೀಲರಾಗಿರಬಹುದು. ನಿವೃತ್ತರು ಎಂದ ಮಾತ್ರಕ್ಕೆ ಜೀವನವೇ ಮುಗಿಯಿತು ಎಂದು ತಿಳಿದುಕೊಳ್ಳಬೇಕಾಗಿಲ್ಲ. ವಿವಿಧ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಂಡು ಸಕ್ರೀಯವಾಗಿದ್ದರೆ ಆರೋಗ್ಯವಾಗಿರಬಹುದು ಎಂದು ಜಿಲ್ಲಾ ನಿವೃತ್ತ ಸರಕಾರಿ ಸಂಘ ಮಂಗಳೂರು ಇದರ ಅಧ್ಯಕ್ಷ ಬಿ.ಎಮ್ ರಾಜಗೋಪಾಲ ಹೇಳಿದರು.
ಅವರು ಬಿ.ಸಿ.ರೋಡಿನ ಲಯನ್ಸ್ ಕ್ಲಬ್ ಸೇವಾ ಸಭಾಂಗಣದಲ್ಲಿ ಜ.7 ರಂದು ಬಂಟ್ವಾಳ ತಾಲೂಕು ಪಿಂಚಣಿದಾರರ ವಾರ್ಷಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪಿಂಚಣಿದಾರರ ಸಂಘದ ಅಧ್ಯಕ್ಷ ಪಿ.ಲೋಕನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿ ನಿವೃತ್ತರಾದವರಿಗೆ ಸಮಾಜದ ಬಗ್ಗೆ ಕಾಳಜಿ ಇರಬೇಕು ಯಾವುದಾದರೊಂದು ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಅತಿಥಿಗಳಾಗಿ ಪ್ರೊ.ರಾಜಮಣಿ ರಾಮಕುಂಜ, ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಮಾತನಾಡಿದರು.
ಸಂಘದ ಉಪಾಧ್ಯಕ್ಷ ಸಂಕಪ್ಪ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೆ. ನೀಲೋಜಿ ರಾವ್ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಜಲಜಾಕ್ಷಿ ಕುಲಾಲ್ ಲೆಕ್ಕಪತ್ರ ಮಂಡಿಸಿದರು. ಜತೆ ಕಾರ್ಯದರ್ಶಿ ಜಯರಾಮ ಪೂಜಾರಿ ವಂದಿಸಿದರು.
75 ವರ್ಷ ತುಂಬಿದ ಪಿ.ಲೋಕನಾಥ ಶೆಟ್ಟಿ , ಅನಂತ ಪದ್ಮನಾಭರಾವ್ ಕೈಕುಂಜೆ ,ವಾರಿಜ ಮೊಡಂಕಾಪು, ಶಂಕರನಾರಾಯಣ ಭಟ್ ಮೊಡಂಕಾಪು, ಗಿರಿಜಾ ಬಾಯಿ ಬಿ.ಸಿ.ರೋಡು, ಶಾಂಭವಿ ಕಂದೂರು,ಫೆಲಿಕ್ಸ್ ಹೆರಾಲ್ಡ್ ಮೊಡಂಕಾಪು, ಸುಬ್ರಾಯ ರಾಮ ಮಡಿವಾಳ, ನೋಣಯ್ಯ ಶೆಟ್ಟಿ ತುಂಬೆ, ಕೃಷ್ಣ ನಾಯ್ಕ ಅಗ್ರಹಾರ, ಪಿ.ಶ್ರೀಧರ ಕೈಕಂಬ, ಜಯಂತಿ ಬೈಪಾಸ್ ರಸ್ತೆ, ಸುಂದರ ಮೂಲ್ಯ ಮಣಿಹಳ್ಳ ಮೊದಲಾದವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ 20 ಮಂದಿ ನೂತನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳನ್ನು ಆರಿಸಲಾಯಿತು.





