ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಥಾಟ್ ಫೋಕಸ್ ಕಂಪೆನಿಗೆ ನೇಮಕಾತಿ…

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯು ನಡೆಯುತ್ತಿದ್ದು ಕಾರ್ಪೊರೇಟ್ ಜಗತ್ತಿನ ಪ್ರಖ್ಯಾತ ಕಂಪೆನಿ ಥಾಟ್ ಫೋಕಸ್ (Thought Focus) ಸಂಸ್ಥೆಯು ನೇಮಕಾತಿ ಪ್ರಕ್ರಿಯೆಯನ್ನು ನಡೆಸಿತ್ತು.
ಕಂಪ್ಯೂಟರ್ ಸೈನ್ಸ್ ವಿಭಾಗದ ಧರಿತ್ರಿ (ಬೆಳ್ತಂಗಡಿಯ ಇಳಂತಿಲದ ಸುಚೇತಾ ಹಾಗೂ ಸುಬ್ರಮಣ್ಯ ಕುಮಾರ್ ದಂಪತಿಗಳ ಪುತ್ರಿ) ಹಾಗೂ ಸೋನಮ್ (ನರಿಮೊಗರಿನ ಶರ್ಮಿಳಾ ಹಾಗೂ ಶಶಿಧರ್ ಕುಮಾರ್ ಇವರ ಪುತ್ರಿ) ಇವರು ಸಂದರ್ಶನವನ್ನು ಯಶಸ್ವಿಯಾಗಿ ಎದುರಿಸಿ ನೇಮಕಾತಿ ಆದೇಶವನ್ನು ಪಡೆದುಕೊಂಡಿದ್ದಾರೆ. ವಾರ್ಷಿಕ 5 ಲಕ್ಷ ರೂಗಳ ವೇತನವನ್ನು ನೀಡುವ ಟ್ರೈನೀ ಇಂಜಿನಿಯರ್ ಹುದ್ದೆಗೆ ಇವರು ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳು ನೇಮಕಾತಿ ಪ್ರಕ್ರಿಯೆಯನ್ನು ಸಮರ್ಥವಾಗಿ ಎದುರಿಸಲು ಬೇಕಾದ ಅಗತ್ಯ ತರಬೇತಿಯನ್ನು ಕಾಲೇಜಿನ ನೇಮಕಾತಿ ವಿಭಾಗದ ಮುಖ್ಯಸ್ಥೆ ಪ್ರೊ.ವಂದನಾ ಶಂಕರ್ ಅವರು ನೀಡಿದ್ದಾರೆ ಎಂದು ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ತಿಳಿಸಿದ್ದಾರೆ.

dharithri
sonam poojary

Related Articles

Back to top button