ಮಂಶಉಲ್ ಬಯಾನ್ ಸ್ಟುಡೆಂಟ್ಸ್ ಯುನಿಯನ್ 2023-24 ನೇ ಸಾಲಿನ ನೂತನ ಸಮಿತಿ ಅಸ್ತಿತ್ವಕ್ಕೆ…

ಸುಳ್ಯ: ಬೆಳ್ಳಾರೆ ದಾರುಲ್ ಹುದಾ ತಂಬಿನಮಕ್ಕಿ ವಿದ್ಯಾ ಸಂಸ್ಥೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ವಿದ್ಯಾರ್ಥಿ ಸಂಘಟನೆ ಮಂಶಉಲ್ ಬಯಾನ್ ಸ್ಟುಡೆಂಟ್ಸ್ ಯುನಿಯನ್ ಇದರ 2023-24 ನೇ ಸಾಲಿನ ಸಮಿತಿಯು ಜೂ.18 ರಂದು ಅಸ್ತಿತ್ವಕ್ಕೆ ಬಂತು.
ದಾರುಲ್ ಹುದಾ ಸಂಸ್ಥೆಯ ಜನರಲ್ ಮೆನೇಜರ್ ಖಲೀಲ್ ಹಿಮಮಿ ಸಖಾಫಿಯವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡ ಸಭೆಯನ್ನು ಖಲಂದರ್ ಹಿಮಮಿ ಸಖಾಫಿ ಉದ್ಘಾಟಿಸಿದರು.ಮುಕ್ತಾರ್ ಹಿಮಮಿ ಸಖಾಫಿ,ಕಬೀರ್ ಹಿಮಮಿ ಸಖಾಫಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.2023-24 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಾಬಿತ್ ನಿಂತಿಕಲ್ಲು ಪ್ರಧಾನ ಕಾರ್ಯದರ್ಶಿಯಾಗಿ ಆಸಿಫ್ ಕೊಡಗು ಹಾಗೂ ಟ್ರಷರರಾಗಿ ಅಮೀನ್ ಕಕ್ಕಿಂಜೆಯನ್ನೂ ಆಯ್ಕೆಮಾಡಲಾಯಿತು. ಸಾಬಿತ್ ನಿಂತಿಕಲ್ಲು ಸ್ವಾಗತಿಸಿದ ಕಾರ್ಯಕ್ರಮವನ್ನು ನೂತನ ಕಾರ್ಯದರ್ಶಿ ಆಸಿಫ್ ಕೊಡಗು ವಂದಿಸಿದರು.
