ಪೇರಡ್ಕದಲ್ಲಿ ಟಿ.ಎಂ.ಶಹೀದ್ ತೆಕ್ಕಿಲ್ ರವರಿಗೆ ಸನ್ಮಾನ…

ಸುಳ್ಯ: ಪೇರಡ್ಕದಲ್ಲಿ ನಡೆದ ಉರೂಸ್ ಸಮಾರಂಭದಲ್ಲಿ ಪೇರಡ್ಕ-ಗೂನಡ್ಕ ಭಾಗದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ರಾಜ್ಯ ಸಭಾ ಸದಸ್ಯರ ಹಾಗೂ ವಿಧಾನಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ ಸುಮಾರು 33 ಲಕ್ಷ ಅನುದಾನ ಬಿಡುಗಡೆಗೆ ಶ್ರಮವಹಿಸಿದ, ಪೇರಡ್ಕ ಮುಹಿದ್ಧೀನ್ ಜುಮಾಮಸೀದಿಯ ಗೌರವಾಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ರವರನ್ನು ಫೆ. 20ರಂದು ಪೇರಡ್ಕ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ಎಸ್.ಕೆ.ಎಸ್.ಎಸ್.ಎಫ್. ನ ರಾಜ್ಯಾಧ್ಯಕ್ಷ ಫ್ರೋ| ಅನೀಸ್ ಕೌಸರಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಜಿ.ಕೆ. ಹಮೀದ್, ಪೇರಡ್ಕ ಜುಮಾಮಸೀದಿಯ ಖತೀಬರಾದ ರಿಯಾಝ್ ಫೈಝಿ, ಕೆವಿಜಿ ಆರ್ಯುವೇದಿಕ್ ಕಾಲೇಜಿನ ಆಡಲಿತಾಧಿಕಾರಿ ಡಾ| ಲೀಲಾಧರ್, ಮಸೀದಿಯ ಅಧ್ಯಕ್ಷ ಆಲಿ ಹಾಜಿ, ಕಲ್ಲುಗುಂಡಿ ಜುಮಾಮಸೀದಿ ಖತೀಬರಾದ ನಹೀಮ್ ಫೈಝಿ, ಮಾಜಿ ಅಧ್ಯಕ್ಷರುಗಳಾದ ಟಿ.ಎಂ.ಬಾಬಾ ಹಾಜಿ ತೆಕ್ಕಿಲ್, ಹಾಜಿ ಇಬ್ರಾಹಿಂ ಕರಾವಳಿ, ಕೆ.ಪಿ.ಜಾನಿ, ದಿನಕರ ಸಣ್ಣಮನೆ, ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ಡಾ| ಉಮ್ಮರ್ ಬೀಜದಕಟ್ಟೆ, ಯು.ಬಿ. ಚಕ್ರಪಾಣಿ, ಗಾಂಧಿನಗರ ಮಸೀದಿ ಅಧ್ಯಕ್ಷ ಕೆ.ಎಂ. ಮುಸ್ತಫಾ, ನಗರ ಪಂಚಾಯತ್ ಮಾಜಿ ಸದಸ್ಯ ಸಂಶುದ್ಧೀನ್, ಪಿ.ಎ.ಮಹ್ಮದ್ ಸುಳ್ಯ, ಪೇರಡ್ಕ ಮಸೀದಿಯ ಪ್ರ. ಕಾರ್ಯದರ್ಶಿ ಹಾಜಿ ಟಿ.ಎಂ. ಅಬ್ದುಲ್ ರಜಾಕ್, ಕೋಶಾಧಿಕಾರಿ ಪಿ.ಕೆ.ಉಮ್ಮರ್, ಪಾಂಡಿ ಅಬ್ಬಾಸ್, ಗ್ರಾ.ಪಂ.ಸದಸ್ಯರಾದ ಜಗದೀಶ್ ರೈ ಕಲ್ಲುಗುಂಡಿ, ಎಸ್.ಕೆ. ಹನೀಫ್ ಸಂಪಾಜೆ, ಗೂನಡ್ಕ ಎಸ್.ಕೆ.ಎಸ್.ಎಸ್.ಎಫ್. ಅಧ್ಯಕ್ಷ ಹಾಜಿ ಸಾಜಿದ್ ಅಝ್‌ಹರಿ, ಎಮ್.ಆರ್.ಡಿ.ಎ. ಅಧ್ಯಕ್ಷ ಜಾಕಿರ್ ಹುಸೈನ್, ಮೂಸ ಪೈಂಬೆಚ್ಚಾರ್, ಅಬ್ದುಲ್ ಗಫೂರ್ ಕಲ್ಮಡ್ಕ, ಡಾ| ಆರ್,ಬಿ ಬಶೀರ್, ಸೂರಜ್ ಹೊಸೂರು. ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button