ರೋಟರಿ ಕ್ಲಬ್ ಸುಳ್ಯ ವತಿಯಿಂದ ಆಲೆಟ್ಟಿ ಅಂಗನವಾಡಿಗೆ ಜಾರು ಬಂಡಿ ಕೊಡುಗೆ…

ಸುಳ್ಯ: ರೋಟರಿ ಕ್ಲಬ್ ಸುಳ್ಯ ವತಿಯಿಂದ ಆಲೆಟ್ಟಿ ಅಂಗನವಾಡಿಗೆ ಜಾರು ಬಂಡಿಯನ್ನು ಕೊಡುಗೆಯಾಗಿ ನೀಡಿಲಾಯಿತು.
ರೋಟರಿ ಜಿಲ್ಲಾ ಗವರ್ನರ್ ಅರ್. ಆರ್. ರವೀಂದ್ರ ಭಟ್ ಉದ್ಘಾಟಿಸಿ, ಶುಭ ಹಾರೈಸಿದರು. ರೋಟರಿ ಕ್ಲಬ್ ಅಧ್ಯಕ್ಷರಾದ ಪ್ರಭಾಕರನ್ ನಾಯರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಇದೇ ಅಂಗನವಾಡಿಗೆ ಇನ್ನೂ ಹೆಚ್ಚಿನ ಕೊಡುಗೆಗಳನ್ನು ನೀಡುವ ಭರವಸೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಗವರ್ನರ್ ಜಿತೇಂದ್ರ ಎನ್.ಎ., ಕಾರ್ಯದರ್ಶಿ ಆನಂದ ಖಂಡಿಗ, ಡಾ. ಪುರುಷೋತ್ತಮ್, ಚಂದ್ರಶೇಖರ್ ಪೇರಾಲು, ದಯಾನಂದ ಆಳ್ವ, ಕಸ್ತೂರಿ ಶಂಕರ್, ಗ್ರಾ.ಪಂ ಸದಸ್ಯೆ ವೀಣಾ ವಸಂತ್, ಶ್ರೀನಾಥ್ ಆಲೆಟ್ಟಿ ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು. ಗಿರಿಜಾ ಶಂಕರ್ ವಂದಿಸಿ, ರಾಮಚಂದ್ರ ಆಲೆಟ್ಟಿ ಧನ್ಯವಾದವಿತ್ತರು.

Sponsors

Related Articles

Back to top button