ದಾಸರ ಪದ ಭಜನಾ ಸ್ಪರ್ಧೆ…

ಬಂಟ್ವಾಳ: ಶ್ರೀ ವಿನಾಯಕ ದುರ್ಗಾಂಭ ಕ್ಷೇತ್ರ , ವಿಶ್ವ ಹಿಂದೂ‌ಪರಿಷತ್, ಭಜರಂಗದಳ ಸಜೀಪ ವಲಯದ ವತಿಯಿಂದ ದಾಸರ ಪದ ಭಜನಾ ಸ್ಪರ್ಧೆ ನಂದಾವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದಕ್ಷಿಣ ಪ್ರಾಂತ ಭಜರಂಗದಳ ಸಂಯೋಜಕ ಸುನಿಲ್ ಕೆ.ಆರ್. ಉದ್ಘಾಟಿಸಿದರು. ಈ ಕಾರ್ಯಕ್ರಮಕ್ಕೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬೇಟಿ ನೀಡಿ ಶುಭ ಹಾರೈಸಿದರು.
ನಂದವಾರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಅರವಿಂದ ಪದ್ಯಾಣ, ಸಮಿತಿ ಸದಸ್ಯರಾದ ಅರುಣ್, ಯಶವಂತ ದೇರಾಜೆ
ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಉಪಾಧ್ಯಕ್ಷ ಕಾ.ಕೃಷ್ಣಪ್ಪ, ಪ್ರಮುಖರಾದ ಲೋಹಿತ್ ಪ್ರಣೋಲಿಬೈಲು , ಸಚಿನ್ ಮೆಲ್ಕಾರ್, ಪದ್ಮನಾಭ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು.

Related Articles

Back to top button