ಸಿ ಎಫ್ ಸಿ ವತಿಯಿಂದ ಝಕರಿಯಾ ಉಸ್ತಾದರಿಗೆ ಬೀಳ್ಕೊಡುಗೆ…

ಸುಳ್ಯ: ಕಲ್ಲುಗುಂಡಿ ಮಸೀದಿಯಲ್ಲಿ ಅನೇಕ ವರ್ಷಗಳ ಕಾಲ ಉಸ್ತಾದರಾಗಿ ಸೇವೆ ಸಲ್ಲಿಸಿದ ಝಕರಿಯಾ ಉಸ್ತಾದರಿಗೆ ಚಟ್ಟೆಕ್ಕಲ್ಲು ಫ್ರೆಂಡ್ಸ್ ಕ್ಲಬ್, ಸಿ.ಎಫ್. ಸಿ(ರಿ.) ಕಲ್ಲುಗುಂಡಿ ವತಿಯಿಂದ ಬೀಳ್ಕೊಡುಗೆ ನಡೆಸಲಾಯಿತು.
ಕಲ್ಲುಗುಂಡಿ ಜುಮಾ ಮಸೀದಿ ಖತೀಬರಾದ ನಈಂ ಫೈಝಿ ಯವರು ದುಆ ನೆರವೇರಿಸಿ ಮಾತನಾಡಿ ಝಕರಿಯಾ ಉಸ್ತಾದರೊಂದಿಗಿನ ಒಡನಾಟ ಮತ್ತು ಸಂಬಂಧವನ್ನು ಕೊಂಡಾಡಿದರು. ಕಲ್ಲುಗುಂಡಿ ಜಮಾಅತ್ ಅಧ್ಯಕ್ಷರಾದ ಅಬ್ಬಾಸ್ ಹಾಜಿ ಸಂಟ್ಯಾರ್, ಮದ್ರಸ ಮ್ಯಾನೇಜ್ಮೆಂಟ್ ಸುಳ್ಯ ಅಧ್ಯಕ್ಷರಾದ ತಾಜ್ ಮಹಮ್ಮದ್ ರವರು ಮಾತನಾಡಿ ಉಸ್ತಾದರ ಸೇವಾಮನೋಭಾವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸನ್ಮಾನಿತ ಝಕರಿಯಾ ಉಸ್ತಾದ್ ಸೇವೆಯಲ್ಲಿರುವ ಸಂದರ್ಭದಲ್ಲಿನ ಊರವರ ಸಹಕಾರ, ಸಹಬಾಳ್ವೆ, ಬಾಂಧವ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಕಲ್ಲುಗುಂಡಿ ಮಹಿಳಾ ಕಾಲೇಜು ಅಧ್ಯಕ್ಷರಾದ ಎಸ್ ಆಲಿ ಹಾಜಿ, ಕಾರ್ಯದರ್ಶಿ ಎ ಕೆ ಹಸೈನಾರ್, ಸಿರಾಜುಲ್ ಇಸ್ಲಾಂ ಅಸೋಸಿಯೇಷನ್ ಅಧ್ಯಕ್ಷರಾದ ಎ ಕೆ ಇಬ್ರಾಹಿಂ, ಕಾರ್ಯದರ್ಶಿ ಎಂ ಸಿ ಅಬೂಬಕರ್, ಸಿ ಎಫ್ ಸಿ ಅಧ್ಯಕ್ಷರಾದ ಯಾಸಿರ್, ವಕ್ಫ್ ಅಧಿಕಾರಿ ಗೌಸ್ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು. ಸಿ ಎಫ್ ಸಿ ಸದಸ್ಯ ಹಾಗೂ ಉಸ್ತಾದರಿಂದ ವಿದ್ಯೆ ಕಲಿತ ಹಾಶಿಂ ಮತ್ತು ಮದ್ರಸ ವಿದ್ಯಾರ್ಥಿ ಲಿಯಾಫ್ ರವರು ಅನಿಸಿಕೆ ವ್ಯಕ್ತಪಡಿಸಿ ಉಸ್ತಾದರ ಕೊಡುಗೆಗಳನ್ನು ಸ್ಮರಿಸಿದರು. ಸಿ ಎಫ್ ಸಿ ಸದಸ್ಯರಾದ ಸ್ವಾದಿಕ್ ಸ್ವಾಗತಿಸಿ, ಕಾರ್ಯದರ್ಶಿ ಸಾಬಿತ್ ರವರು ವಂದಿಸಿದರು.

whatsapp image 2023 04 22 at 9.56.58 am (1)
whatsapp image 2023 04 22 at 9.56.59 am
Sponsors

Related Articles

Back to top button