ಮತದಾರರ ದಿನಾಚರಣೆ ಸ್ಪರ್ಧಾ ಕಾರ್ಯಕ್ರಮ…
ಬಂಟ್ವಾಳ:ತಾಲೂಕು ಮಟ್ಟದ ತಾಲೂಕು ಮಟ್ಟದ ಮತದಾರರ ದಿನಾಚರಣೆ ಸ್ಪರ್ಧಾ ಕಾರ್ಯಕ್ರಮವು ಸರಕಾರಿ ಪ್ರೌಢಶಾಲೆ ಶಂಭೂರು ಇಲ್ಲಿ ನ.20 ರಂದು ನಡೆಯಿತು.
ಅಧ್ಯಕ್ಷತೆಯನ್ನು ಶ್ರೀ ಸಚಿನ್ ಕುಮಾರ್ , ಕಾರ್ಯನಿರ್ವಹಣಾಧಿಕಾರಿಗಳು ತಾಲೂಕು ಪಂಚಾಯತ್ ಬಂಟ್ವಾಳ ಇವರು ವಹಿಸಿಕೊಂಡು ದೇಶದ ಮುಂದಿನ ಪ್ರಜೆಗಳಾದ ಯುವ ಜನಾಂಗ ಮತ ಚಲಾಯಿಸಿ, ಪ್ರಜಾಪ್ರಭುತ್ವವನ್ನು ಉಳಿಸುವುದು
ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮವನ್ನು ಉಪತಹಶೀಲ್ದಾರ್ ಆಗಿರುವ ಶ್ರೀ ನವೀನ್ ಬೆಂಜನ ಪದವು ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತದಲ್ಲಿ ಮತದಾನ ನಮ್ಮ ಹಕ್ಕು. ಈ ಹಕ್ಕುಗಳಿರುವುದರಿಂದಲೇ ನಮಗೆ ತೊಂದರೆಯಾದಾಗ ನ್ಯಾಯ ಕೇಳುವ ಅವಕಾಶ ನಮಗೆ ದೊರೆಯುತ್ತದೆ ಎಂದು ತಿಳಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಂಸ್ಥೆಯ ಮುಖ್ಯ ಶಿಕ್ಷಕರಾದ ಶ್ರೀ ಕಮಲಾಕ್ಷ ಸ್ವಾಗತಿಸಿದರು. ಶಿಕ್ಷಣ ಸಂಯೋಜಕರಾದ ಕೆ ಸುಜಾತ ಕುಮಾರಿ ಪ್ರಸ್ತಾವನೆ ಯೊಂದಿಗೆ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾದ ಶ್ರೀ ಜೋಯಲ್ ಲೋಬೊ ಶುಭ ಹಾರೈಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಂಘದ ತಾಲೂಕು ಕಾರ್ಯದರ್ಶಿಗಳಾದ ಶ್ರೀ ಭಾಸ್ಕರ್ ರಾವ್, ಪ್ರಭಾರ ಸಮನ್ವಯಾಧಿಕಾರಿಗಳಾದ ಶ್ರೀಮತಿ ವಿದ್ಯಾ, ಶಿಕ್ಷಣ ಸಂಯೋಜಕರಾದ ಶ್ರೀಮತಿ ಸುಧಾ, ಸಿ ಆರ್ ಪಿ ಶ್ರೀಮತಿ ಪ್ರೇಮಲತಾ ಉಪಸ್ಥಿತರಿದ್ದರು.ಬಿ ಐ ಇ ಆರ್ ಟಿ ಶ್ರೀಮತಿ ಸುರೇಖಾ ಯಳವಾರ ಧನ್ಯವಾದ ಅರ್ಪಿಸಿದರು. ಸಂಸ್ಥೆಯ ಶಿಕ್ಷಕರಾದ ಶ್ರೀ ದೇವದಾಸ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಒಟ್ಟು 52 ಶಾಲೆಗಳ 154 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು.