ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಮಾಸ್ಟ್ ದೀಪ ಉದ್ಘಾಟನೆ…

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಪುರಸಭಾ ವತಿಯಿಂದ ನೂತನವಾಗಿ ನಿರ್ಮಿಸಿರುವ 2 ಮಿನಿ ಮಾಸ್ಟ್ ದೀಪವನ್ನು ಅಲಂಗಾರು ದೇವಸ್ಥಾನದ ಮುಖ್ಯ ಅರ್ಚಕರಾದ ಈಶ್ವರ್ ಭಟ್ ಉದ್ಘಾಟಿಸಿದರು.
ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಪುರಸಭಾ ಅಧ್ಯಕ್ಷದರಾದ ಶ್ರೀ ಪ್ರಸಾದ್ ಕುಮಾರ್ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಮುಖರಾದ ಬಾಹುಬಲಿ ಪ್ರಸಾದ್, ಬಾಲಾಜಿ ವಿಶ್ವನಾಥ್ ಪ್ರಭು ದಂಪತಿಗಳು, ಡಾ.ವಿನಯ್ ಆಳ್ವ, ಗಣೇಶ್ ಅಲಂಗಾರ್, ಪುರಾಸಭಾ ಸದಸ್ಯರಾದ ಶ್ರೀಮತಿ ಸೌಮ್ಯ ಸಂದೀಪ್ ಶೆಟ್ಟಿ, ಶ್ರೀಮತಿ ಶ್ವೇತಾ ಪ್ರವೀಣ್ ಜೈನ್, ಶ್ರೀಮತಿ ಧನಲಕ್ಷ್ಮಿ ಮಾರೂರು, ನವೀನ್ ಶೆಟ್ಟಿ, ಗಿರೀಶ್ ಕೋಟೆಬಾಗಿಲು, ರಾಘವ ಹೆಗ್ಡೆ, ಹಾಗೂ ದೇವಸ್ಥಾನದ ಭಕ್ತಾಭಿಮಾನಿಗಳು ಮೊದಲಾದವರು ಉಪಸ್ಥಿತರಿದ್ದರು.
