ರಸ್ತೆಗೆ ಜಾಗ ಕೊಡುಗೆ – ರಘು ಪೂಜಾರಿ ಅವರಿಗೆ ಅಭಿನಂದನೆ…

ಬಂಟ್ವಾಳ: ವೀರಕಂಬ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಿತ್ತ ಕೋಡಿ ಎಂಬಲ್ಲಿ ವಾಸಿಸುತ್ತಿರುವ ನಾಗರಿಕರ ಬಹುದಿನದ ಬೇಡಿಕೆಯಾದ ರಸ್ತೆಗಾಗಿ ವೀರಕಂಬ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಸದಸ್ಯರುಗಳ ಮನವಿಗೆ ಬೆಲೆಕೊಟ್ಟು ತನ್ನ ಸ್ವಂತ ಜಾಗವನ್ನು ಉಚಿತವಾಗಿ ನೀಡಿ ರಸ್ತೆ ಹಾದುಹೋಗುವ ಸ್ಥಳದಲ್ಲಿದ್ದ ಅಡಿಕೆ ಹಾಗೂ ತೆಂಗಿನ ಗಿಡಗಳನ್ನು ತೆರವು ಮಾಡಿ ಪಂಚಾಯತ್ ವತಿಯಿಂದ ರಸ್ತೆ ಮಾಡಲು ಅನುವು ಮಾಡಿಕೊಟ್ಟ ಅಂಕದಡ್ಕ ನಿವಾಸಿ ಶ್ರೀಯುತ ರಘು ಪೂಜಾರಿ ಇವರನ್ನು ಬಂಟ್ವಾಳದ ಮಾನ್ಯ ಬಂಟ್ವಾಳ ಶಾಸಕರಾದ ಶ್ರೀಯುತ ರಾಜೇಶ್ ನಾಯಕ್ ರವರು ರಸ್ತೆಯ ಶಿಲನ್ಯಾಸಕ್ಕೆ ಆಗಮಿಸಿ ಶ್ರೀಯುತ ರಘು ಪೂಜಾರಿಯವರನ್ನ ಮಿತ್ತ ಕೋಡಿ ನಾಗರಿಕರ ಪರವಾಗಿ ಅಭಿನಂದಿಸಿ ಅವರ ಸೇವಾ ಮನೋಭಾವವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ದಿನೇಶ್ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರಾದ ಜಯಂತಿ ಜನಾರ್ಧನ್, ಮೀನಾಕ್ಷಿ ಸುನಿಲ್, ಮಿತ್ತಕೋಡಿ ಹಾಗೂ ಪುಂಡಿಕಾಯಿ ವಾಪ್ತಿಯ ನಾಗರಿಕರು ಉಪಸ್ಥಿತರಿದ್ದರು.

whatsapp image 2023 03 16 at 10.49.55 am
Sponsors

Related Articles

Back to top button