ಕಾಂಗ್ರೆಸ್ ಮುಖಂಡ ಗಣೇಶ್ ಅಕಾಲಿಕ ನಿಧನ – ಟಿ ಎಂ ಶಾಹೀದ್ ಸಂತಾಪ…

ಸುಳ್ಯ: ಕೋವಿಡ್ -19 ರಿಂದ ನಿಧನರಾದ ಅರಂತೋಡು- ತೊಡಿಕಾನ ಭಾಗದ ಕಾಂಗ್ರೆಸ್ ಮುಖಂಡ ಗಣೇಶ್ ಅಡ್ಯಡ್ಕ ಇವರ ಪಾರ್ಥಿವ ಶರೀರಕ್ಕೆ ಕೆ ಪಿ ಸಿ ಸಿ ಮಾಜಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ರವರು ಪಕ್ಷದ ಧ್ವಜ ಹೊದಿಸಿ ಗೌರವ ಸೂಚಿಸಿದರು.
ಈ ಸಂದರ್ಭದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ,ರಾಜ್ಯ ಸಾಮಾಜಿಕ ಜಾಲತಾಣದ ಪ್ರದಾನ ಕಾರ್ಯದರ್ಶಿ ರಿಯಾಜ್ ಕಲ್ಲುಗುಂಡಿ ಪಾಲ್ಗೊಂಡಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ ಜಯರಾಮ್, ಕೆಪಿಸಿಸಿ ಕಡಬ ಉಸ್ತುವಾರಿ ನಂದಕುಮಾರ್, ಡಾ.ರಘು, ಸಂಶುದ್ದೀನ್ ,ಹಮೀದ್ ಕುತ್ತಮೊಟ್ಟೆ, ಕೀರ್ತನ್ ಗೌಡ ಕೊಡೆಪಾಲ ಹಾಗು ಹಲವಾರು ಹಿರಿಯರು ಅಂತಿಮ ದರ್ಶನದಲ್ಲಿ ಪಾಲ್ಗೊಂಡಿದ್ದರು.

Related Articles

Back to top button