ಶ್ರೀ ವೀರಾಂಜನೇಯ ಯುವಕ ಸಂಘ( ರಿ ) ಸಜೀಪ – ಕೆಸರುಗದ್ದೆ ಕ್ರೀಡಾಕೂಟ…
ಬಂಟ್ವಾಳ: ಶ್ರೀ ವೀರಾಂಜನೇಯ ಯುವಕ ಸಂಘ( ರಿ ) ಸಜೀಪ ಇದರ ಆಶ್ರಯದಲ್ಲಿ 32ನೇ ವರ್ಷದ ಸಜೀಪ ಮೊಸರು ಕುಡಿಕೆ ಉತ್ಸವದ ಅಂಗವಾಗಿ ‘ಕೆಸರದ ಗೊಬ್ಬುಲು’ ಕೆಸರುಗದ್ದೆ ಕ್ರೀಡಾಕೂಟವನ್ನು ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುoಜ ವೆಂಕಟೇಶ್ವರ ಭಟ್ ವಹಿಸಿದ್ದರು. ಜಿಲ್ಲಾ ಬಿಜೆಪಿ ಮಂಡಲ ಕಾರ್ಯದರ್ಶಿ ಸತೀಶ್ ಕುಂಪಲ, ಜಿಲ್ಲಾ ಹಿಂದುಳಿದ ವರ್ಗ ಬಿಜೆಪಿ ಕಾರ್ಯದರ್ಶಿ ಉದಯಕುಮಾರ್ ಕಾಂಜಿಲ, ಮನೋಹರ ಶಾಂತಿನಗರ, ರವಿರಾಜ್, ಯಶವಂತ ದೇರಾಜೆ ಗುತ್ತು, ಪ್ರದೀಪ್, ವಸಂತ ಪರಾಜೆ, ರಾಮ ಮೊದಲಾದವರು ಉಪಸ್ಥಿತರಿದ್ದರು.