ಇತಿಹಾಸ ಪ್ರಸಿದ್ಧ ಪೇರಡ್ಕ -ಗೂನಡ್ಕ ದರ್ಗಾ ಶರೀಫ್ ಉರೂಸ್ ಸಮಾರೋಪ ಮತ್ತು ಸರ್ವ ಧರ್ಮ ಸಮ್ಮೇಳನ…
ಎಂ. ಎ. ಗಫೂರ್, ಟಿ. ಎಂ ಶಹೀದ್, ಸದಾನಂದ ಮಾವಜಿ ಯವರಿಗೆ ಸನ್ಮಾನ...
ಸುಳ್ಯ: ಸುಮಾರು 400 ವರ್ಷಗಳ ಇತಿಹಾಸ ವನ್ನು ಹೊಂದಿರುವ ಸರ್ವ ಧರ್ಮಿಯರಿಂದ ಗೌರವಿಸಲ್ಪಡುವ ಪೇರಡ್ಕ – ಗೂನಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ವಾರ್ಷಿಕ ಉರೂಸ್ ಕಾರ್ಯಕ್ರಮ ಸಮಾರೋಪ ಸಮಾರಂಭ ದಲ್ಲಿ ಕರ್ನಾಟಕ ಸರ್ಕಾರದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ. ಎ. ಗಫೂರ್ ಉಡುಪಿ, ಇತ್ತೀಚೆಗೆ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನ ಮಾನ ನೀಡಿ ಸರ್ಕಾರ ಆದೇಶಿಸಿದ ಹಿನ್ನಲೆಯಲ್ಲಿ, ಪೇರಡ್ಕ ಮಖಾo ರಸ್ತೆಗೆ ಸೇತುವೆ, ಸರ್ವ ಖುತು ಕಾಂಕ್ರೀಟ್ ರಸ್ತೆ, ಯಾತ್ರಿ ನಿವಾಸ್ ನಿರ್ಮಾಣ, ಕಾಂಪೌಂಡ್ ವಾಲ್, ತಡೆಗೋಡೆ ಮೊದಲಾದ ಕಾಮಗಾರಿಗೆ ವಿಶೇಷ ಅನುದಾನ ಬಿಡುಗಡೆ ಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ, ಪೇರಡ್ಕ ಜುಮ್ಮಾ ಮಸ್ಜಿದ್ ಅಧ್ಯಕ್ಷ ರೂ ಆದ ಟಿ. ಎಂ. ಶಹೀದ್ ರವರನ್ನು ಹಾಗೂ ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿಯವರನ್ನು ಉರೂಸ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಎಂ. ಎ. ಗಫೂರ್ ಮಾತನಾಡಿ ಶತಮಾನಗಳ ಹಿಂದೆ ಪೇರಡ್ಕದಂತಹ ಗ್ರಾಮೀಣ ಪ್ರದೇಶದಲ್ಲಿ ಜಾತಿ ಧರ್ಮ, ಪಂಥ ಭೇದವಿಲ್ಲದೆ ಮಾನವೀಯತೆಯ ಸಂದೇಶ ಮತ್ತು ಜನರ ಸಂಕಷ್ಟ ಕ್ಕೆ ನೆರವಾಗುತ್ತಿದ್ದ ಪುಣ್ಯ ಪುರುಷರ ಹಾದಿಯಲ್ಲಿ ನಾವು ಸಾಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫ, ಕಲ್ಲುಗುಂಡಿ ವರ್ತಕರ ಸಂಘದ ಅಧ್ಯಕ್ಷ ಯು. ಬಿ. ಚಕ್ರಪಾಣಿ, ಬೆಂಗಳೂರು ಫಾರ್ಮೆಡ್ ಗ್ರೂಪ್ ಉಪಾಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ ಮೊದಲಾದವರು ಉಪಸ್ಥಿತರಿದ್ದರು. ಉರೂಸ್ ಸಮಿತಿ ಅಧ್ಯಕ್ಷ ಜಿ. ಕೆ. ಹಮೀದ್ ಸ್ವಾಗತಿಸಿ, ವಂದಿಸಿದರು.






