ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ವತಿಯಿಂದ ಸಮಸ್ತ ಶತಮಾನೋತ್ಸವ ಪ್ರಚಾರ ಸಮ್ಮೇಳನ- ಸ್ವಲಾಹುದ್ದಿನ್ ಫೈಝಿ ವಲ್ಲಪುಝ ಸುಳ್ಯಕ್ಕೆ…

ಸುಳ್ಯ: ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ವತಿಯಿಂದ ಸಮಸ್ತ ಶತಮಾನೋತ್ಸವದ ಭಾಗವಾಗಿ ನಡೆಯಲಿರುವ ಅಂತರಾಷ್ಟ್ರೀಯ ಮಹಾ ಸಮ್ಮೇಳನ ಇದರ ಪ್ರಚಾರ ಕಾರ್ಯಕ್ರಮ ಸುಳ್ಯ ಗಾಂಧಿ ನಗರ ಪೆಟ್ರೋಲ್ ಪಂಪು ಮುಂಭಾಗ ಜ. 20 ರಂದು ಸಂಜೆ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಹಾಜಿ ಅಬ್ದುಲ್ ಖಾದರ್ ಬಾಯಂಬಾಡಿ ವಹಿಸಲಿದ್ದಾರೆ. ಬಹು ಸಯ್ಯದ್ ಜೈನುಲ್ ಆಬಿದೀನ್ ತಂಗಳ್ ದುಗ್ಗಳಡ್ಕ ದುವಾ ನೆರವೇರಲಿಸಲಿದ್ದಾರೆ .ಕಾರ್ಯಕ್ರಮವನ್ನು ಬಹು ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಉದ್ಘಾಟಿಸಲಿದ್ದಾರೆ.ಮುಖ್ಯ ಭಾಷಣ ವನ್ನು ಬಹು.ಸ್ವಲಾಹುದ್ದಿನ್ ಫೈಝಿ ವಲ್ಲಪುಝ ಮಾಡಲಿದ್ದಾರೆ . ಬಹು ಶೈಖುನಾ ಉಸ್ಮಾನುಲ್ ಫೈಝಿ ತೊಡಾರ್ ,ಬಹು ಅಬ್ದುಲ್ಲಾ ಮುಸ್ಲಿಯಾರ್ ಕೊಡಗು, ಬಹು ಅನಿಸ್ ಕೌಸರಿ , ಟಿ.ಎಂ.ಶಾಹಿದ್ ತೆಕ್ಕಿಲ್ ,ಬಹು ಮಹಮ್ಮದ್ ಮುಸ್ಲಿಯಾರ್ ಮುಂಡೊಳೆ, ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಅಧ್ಯಕ್ಷ ಅಬೂಬಕ್ಕರ್ ಪೂಪಿ,ಸೇರಿದಂತೆ ಕಾರ್ಯಕ್ರಮದಲ್ಲಿ ಹಲವು ಉಲಮಾ, ಉಮರಾ, ರಾಜಕೀಯ, ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

whatsapp image 2026 01 20 at 10.24.52 am

Related Articles

Back to top button