ಅಣ್ಣಪ್ಪ ಬಾಳಿಗ ಎಜುಕೇಶನ್ ಟ್ರಸ್ಟ್ ಉದ್ಘಾಟನೆ…

ಶಿಕ್ಷಣ ಪಡೆದು ವಿನಯವಂತರಾಗಬೇಕು- ಸುರೇಶ್ ಬಾಳಿಗ...

ಬಂಟ್ವಾಳ ಜ. 14 :ವಿದ್ಯಾರ್ಥಿಗಳು ಶಿಕ್ಷಣ ಪಡೆದು ವಿನಯವಂತರಾಗಬೇಕು. ಜ್ಞಾನಿಗಳಾದರೆ ಸಾಲದು, ಉತ್ತಮ ಸಂಸ್ಕಾರವನ್ನು ಪಡೆಯಬೇಕು. ಒಳ್ಳೆಯ ಗುಣ ನಡತೆಗಳನ್ನು ಬೆಳೆಸಿಕೊಳ್ಳಬೇಕು ಆಂಗ್ಲಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿದ್ದರೂ ಕನ್ನಡ ಭಾಷೆಗೆ ವಿಶೇಷ ಗಮನ ಕೊಡಬೇಕು ಎಂದು ಮ್ಯಾನೇಜಿಂಗ್ ಟ್ರಸ್ಟಿ ಉದ್ಯಮಿ ಸುರೇಶ್ ವಿ. ಬಾಳಿಗ ಹೇಳಿದರು.
ಅವರು ಬಂಟ್ವಾಳ ವಿದ್ಯಾನಿಕೇತನ ಆಂಗ್ಲಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಂದರ್ಭ, ಅಣ್ಣಪ್ಪ ಬಾಳಿಗ ಎಜುಕೇಶನ್ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಣ್ಣಪ್ಪ ಬಾಳಿಗ ಎಜುಕೇಶನ್ ಟ್ರಸ್ಟ್‍ನ ಸ್ಥಾಪಕರಾದ ಬಿ. ರಮಣಿ ವಿ. ಬಾಳಿಗ, ಬಂಟ್ವಾಳ ಬಾಳಿಗಾ ಟ್ರಸ್ಟ್ ಅಧ್ಯಕ್ಷರಾದ ಬಿ. ಲಕ್ಷ್ಮಣ ಅಚ್ಚುತ ಬಾಳಿಗ ದೀಪ ಬೆಳಗಿಸಿ ಅಣ್ಣಪ್ಪ ಬಾಳಿಗ ಎಜುಕೇಶನ್ ಟ್ರಸ್ಟ್ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಎಸ್.ವಿ.ಎಸ್.ದೇವಳ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸುರೇಖ ಕೆ. ಅತಿಥಿಯಾಗಿ ಮಾತನಾಡಿ ಶಾಲಾ ಚಟುವಟಿಕೆಗಳನ್ನು ಅಭಿನಂದಿಸಿದರು.
ಇನ್ನೋರ್ವ ಅತಿಥಿ ಮಂಗಳೂರಿನ ಡಾ. ಅನುಪಮಾ ಬಾಳಿಗ ಮಾತನಾಡಿ ವಿದ್ಯಾರ್ಥಿಗಳು ಕಲಿಕೆಯ ಕಡೆಗೆ ಗಮನ ಕೊಡಬೇಕು ಎಂದರು. ಸಂಚಾಲಕ ಪಿ.ವಿವೇಕಾನಂದ ಕಾಮತ್, ವಿ.ಎನ್.ಆರ್ ಗೋಲ್ಡ್‍ನ ಮಾಲಕರಾದ ನಾಗೇಂದ್ರ ವಾಸುದೇವ ಬಾಳಿಗ, ವಿದ್ಯಾ ಎನ್. ಬಾಳಿಗ , ದೀಪಾ ನರೇಶ್ ಬಾಳಿಗ , ಸಂದೀಪ್ ಸುರೇಶ್ ಬಾಳಿಗ, ಟ್ರಸ್ಟಿ ಬಿ. ಕಿರಣ್ ಎಸ್ ಬಾಳಿಗ, ಕೋಶಾಧಿಕಾರಿ ಸಂಜಯ್ ಎಸ್. ಬಾಳಿಗ, ಪಿಟಿಎ ಅಧ್ಯಕ್ಷ ರಾಜೀವ್ ಕೆ. ಉಪಸ್ಥಿತರಿದ್ದರು.
ಮೊಂಟೆಸೊರೀ ವಿಭಾಗದ ಮುಖ್ಯೋಪಾಧ್ಯಾಯಿನಿ ಸವಿತಾ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ವಿಭಾಗದ ಶಿಕ್ಷಕಿ ಹೇಮಾ ವರದಿ ವಾಚಿಸಿದರು. ಎಸ್.ವಿಎಸ್. ದೇವಳ ಪ.ಪೂ.ಕಾಲೇಜಿನ ಉಪನ್ಯಾಸಕ ವೆಂಕಟೇಶ್ ನಾಯಕ್ ,ಅಧ್ಯಾಪಕಿ ನಿಶಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪವಿತ್ರಾ ವಂದಿಸಿದರು.

 

 

 

 

Related Articles

Back to top button