ತೆಕ್ಕಿಲ್ ಪ್ರತಿಷ್ಠಾನದಿಂದ 21 ನೇ ವರ್ಷದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮೂರು  ಧರ್ಮ ಗುರುಗಳಿಗೆ ಸನ್ಮಾನ -ಸೌಹಾರ್ದ ಸಂದೇಶ ಸಾರಿದ ತೆಕ್ಕಿಲ್ ಪ್ರತಿಷ್ಠಾನ…     

ಸುಳ್ಯ: ಅರಂತೋಡು ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ  21 ನೇ ವರ್ಷದ ಸೌಹಾರ್ದ ಇಫ್ತಾರ್ ಕೂಟವು ಮಾರ್ಚ್ 13 ರಂದು ತೆಕ್ಕಿಲ್ ಸಮುದಾಯ ಭವನದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರು ಹಾಗೂ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸೌಹಾರ್ದ ಸಂದೇಶ ನೀಡಿ ಮಾತನಾಡಿದ ಅಜ್ಜಾವರ ಚೈತನ್ಯ ಸೇವಾಶ್ರಮದ ಶ್ರೀ ಶ್ರೀ ಸ್ವಾಮಿ ಯೋಗೇಶ್ವರಾನಂದ ಸರಸ್ವತಿ ,ಗುತ್ತಿಗಾರು ಸೈಂಟ್ ಮೇರೀಸ್ ಚರ್ಚ್ ನ ಧರ್ಮಗುರುಗಳಾದ ಆದರ್ಶ್ ಜೋಸೆಫ್ ,ಪೇರಡ್ಕ ಗೂನಡ್ಕ ಮುಹಿದ್ಧೀನ್ ಜುಮಾ ಮಸೀದಿಯ ಖತೀಬರಾದ ನಯೀಮ್ ಫೈಝಿ ಅಲ್ ಮಹಬರಿ ಅವರನ್ನು ಸೇರಿದ ಗಣ್ಯರು ಅಧಿಕಾರಿಗಳ ಜೊತೆ ಸನ್ಮಾನಿಸಲಾಯಿತು.
ಸೌಹಾರ್ದ ಕೂಟಗಳು, ಸೌಹಾರ್ದ ಸಮ್ಮೇಳನಗಳು ಹೆಚ್ಚಾಗಿ ಆಗಬೇಕು ಮತ್ತು ದೇಶದ ಮೂಲೆ ಮೂಲೆಗಳಲ್ಲಿ ನಡೆಯುವಂತಾಗಲಿ ಎಂದು ಎಲ್ಲರು ಆಶಿಸಿ ಇಫ್ತಾರ್ ಕೂಟದ  ಮಹತ್ವ ತಿಳಿಸಿದರು.
ನಿವೃತ್ತ ಪ್ರಾಂಶುಪಾಲ ಕೆ.ಆರ್ ಗಂಗಾಧರ್ ಸೌಹಾರ್ದ ಇಫ್ತಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಟಿ.ಎಂ ಶಹೀದ್ ತೆಕ್ಕಿಲ್ ರವರು ಪ್ರತೀವರ್ಷ ಸರ್ವಧರ್ಮದವರನ್ನು ಕರೆದು ಸೌಹಾರ್ದ ಇಫ್ತಾರ್ ಕೂಟವನ್ನು ನಡೆಸುತ್ತಿದ್ದು ಎಲ್ಲಾ ಧರ್ಮದವರು ಬರುತ್ತಿದ್ದಾರೆ. ಇದು ಒಳ್ಳೆಯ ಗುಣ ಎಂದು ಕೊಂಡಾಡಿದರು. ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಶುಭಾಂಶನೆಗೈದರು. ಸುಳ್ಯ ನಗರ ಅಭಿವೃದ್ಧಿ ಪ್ರಾಧಿಕಾರ  ಅಧ್ಯಕ್ಷ ಕೆ.ಎಂ ಮುಸ್ತಫ, ತಹಶೀಲ್ದಾರ್ ಮಂಜುಳ, ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ತಿಮ್ಮಪ್ಪ ನಾಯ್ಕ್, ವಲಯ ಅರಣ್ಯಾಧಿಕಾರಿ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ ಹರಗಿ, ಜಿಲ್ಲಾ ಪಂಚಾಯತ್ ಇಂಜಿನಿಯರ್ ಪಯಾಝ್ ಅಹ್ಮದ್, ಸುಳ್ಯ ಠಾಣಾಧಿಕಾರಿ ಸಂತೋಷ್, ಕೆ.ವಿ.ಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ| ಲೀಲಾಧರ್, ಸುಳ್ಯ ಬ್ಲಾಕ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ನ.ಪಂ ಮಾಜಿ ಅಧ್ಯಕ್ಷ ಸಂಶುದ್ಧೀನ್, ವೆಂಕಟರಮಣ ಸೊಸೈಟಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಟಿ ವಿಶ್ವನಾಥ್, ಕೆಪೆಕ್ ಮಾಜಿ ಸದಸ್ಯ ಪಿ.ಎ ಮಹಮ್ಮದ್, ಮಾಜಿ ನಗರ ಪಂಚಾಯತ್ ಸದಸ್ಯ ಗೋಕುಲ್ ದಾಸ್, ನಿವೃತ್ತ ಮುಖ್ಯೋಪಾಧ್ಯಾಯ ದಾಮೋದರ ಮಾಸ್ತರ್, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ಟಿ.ಎಂ ಶಮೀರ್ ತೆಕ್ಕಿಲ್, ಟಿ.ಎಂ ಜಾವೇದ್ ತೆಕ್ಕಿಲ್, ಉದ್ಯಮಿ ಲತೀಫ್ ಹರ್ಲಡ್ಕ,ಹಮೀದ್ ಕುತ್ತಮಟ್ಟೆ ನ್ಯಾಯವಾದಿ ಮೂಸ ಪೈಂಬಚಾಲ್ ,ಸಿದ್ದೀಕ್ ಕೋಕೋ ,ಶರೀಫ್ ಕಂಠಿ ,ಕರುಣಾಕರ ಅಡ್ಪಂಗಾಯ ,ತೀರ್ಥರಾಮ್ ಪರ್ಣೋಜಿ ,ನಂದರಾಜ್ ಸಂಕೇಶ ,ಶಶಿಧರ್ ಎಂ ಜೆ  ,ನ್ಯಾಯವಾದಿ ಧರ್ಮಪಾಲ ಕೊಯಿಂಗಾಜೆ, ರಾಜು ಪಂಡಿತ್ ಭವಾನಿ ಶಂಕರ ಕಲ್ಮಡ್ಕ,ಕೆ ಆರ್ ಪದ್ಮನಾಭ,ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸರ್ವ ಧರ್ಮ, ಸರ್ವ ಪಕ್ಷದ, ಸಾಮಾಜಿಕ,ಮತ್ತು ವಿವಿಧ ಕ್ಷೇತ್ರದ ಗಣ್ಯರು,ಅಧಿಕಾರಿಗಳು ಸಮೂಹಿಕವಾಗಿ ಇಫ್ತಾರ್ ನೆರೆವೇರಿಸಿದರು. ಕಾರ್ಯಕ್ರಮದ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು.

whatsapp image 2026 03 15 at 11.06.59 am

Related Articles

Back to top button