ಸಂಸದ ನಳಿನ್ ಕುಮಾರ್ ಕಟೀಲ್ ಅವರಿಂದ ಏನೂ ನಿರೀಕ್ಷಿಸುವ ಹಾಗಿಲ್ಲ – ಮಿಥುನ್ ರೈ…

ಮಂಗಳೂರು: ಒಂದು ಫ್ಲೈ ಓವರ್ ಮಾಡಲು ಹತ್ತು ವರ್ಷ ತೆಗೆದುಕೊಂಡ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಂದ ಏನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳಿದ್ದಾರೆ.
ಮಂಗಳೂರಿನ ಐಟಿ ಕಚೇರಿಯನ್ನು ಗೋವಾಕ್ಕೆ ಸ್ಥಳಾಂತರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರದ ನಿಲುವನ್ನು ಖಂಡಿಸಿ ಇಂದು(ಬುಧವಾರ) ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಮಿನಿವಿಧಾನಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಹತ್ತು ವರ್ಷದಲ್ಲಿ ಮಾಡಿದ ಆ ಫ್ಲೈ ಓವರ್ ಬಿರುಕು ಬಂದಿದೆ. ಅದನ್ನು ಭಗವಂತನೇ ಉಳಿಸಬೇಕಿದೆ ಎಂದ ಅವರು,
ಬಿಜೆಪಿ ಸರಕಾರ ಎಲ್ಲವನ್ನೂ ಖಾಸಗಿ ಸಂಸ್ಥೆಗಳಿಗೆ ಮಾರುತ್ತಿದೆ. ಬ್ಯಾಂಕ್‌‌ಗಳ ವಿಲೀನ, ಏರ್ಪೋರ್ಟ್‌ಗಳ ಖಾಸಗೀಕರಣ ಮುಂತಾದ ಕ್ರಮಗಳ ಮೂಲಕ ಜನರ ಹಕ್ಕನ್ನು ಕಿತ್ತುಕೊಳ್ಳುತ್ತಿದೆ ಎಂದರು..
ಶಾಸಕ ಯು.ಟಿ.ಖಾದರ್ ಮಾತನಾಡಿ, ಬಿಜೆಪಿ ಸರಕಾರದಿಂದ ಹೊಸ ಯೋಜನೆಗಳನ್ನು ತರುವ ಕೆಲಸ ಆಗುತ್ತಿಲ್ಲ ಮಾತ್ರವಲ್ಲ ಹಿಂದಿನ ಯೋಜನೆಗಳ ಸಮರ್ಪಕ ನಿರ್ವಹಣೆಯೂ ನಡೆಯುತ್ತಿಲ್ಲ. ಭಾವನಾತ್ಮಕ ವಿಚಾರಗಳಿಂದ ಜನರನ್ನು ಮಂತ್ರ ಮುಗ್ಧರಾಗಿಸುವ ಕೆಲಸ ಮಾತ್ರ ಬಿಜೆಪಿಯಿಂದ ಆಗುತ್ತಿದೆ ಎಂದರು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಕರಾದ ಐವನ್ ಡಿಸೋಜ, ಜೆ.ಆರ್.ಲೋಬೊ, ಮಾಜಿ ಸಚಿವ ಅಭಯಚಂದ್ರ ಜೈನ್ ಹಾಗೂ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button