ಕೆ.ಟಿ ಅಬೂಬಕ್ಕರ್ ಗೂನಡ್ಕ ನಿಧನ…
ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ಅಂತಿಮ ನಮನ, ಸಾಂತ್ವನ, ವಿಶೇಷ ಪ್ರಾರ್ಥನೆ...

ಸುಳ್ಯ: ಸಂಪಾಜೆ ಗ್ರಾಮದ ಗೂನಡ್ಕ ನಿವಾಸಿ ಅತ್ಯಂತ ಹಿರಿಯ ವ್ಯಕ್ತಿ ಕೆ.ಟಿ. ಅಬೂಬಕ್ಕರ್ 94 ವರ್ಷ ನಿಧನರಾಗಿದ್ದು, ಕರ್ನಾಟಕ ವಿಧಾನಸಭೆಯ ಸ್ಪೀಕರ್ ಸನ್ಮಾನ್ಯ ಯು. ಟಿ. ಖಾದರ್ ಗೂನಡ್ಕ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿ ಸಾಂತ್ವನ ಹೇಳಿದರು. ಮೃತರಿಗೆ 5 ಮಕ್ಕಳು 2 ಗಂಡು 3 ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಪುತ್ರ ರಝಾಕ್ ಸುಳ್ಯ ತಾಲೂಕು ಕಚೇರಿ ಸಿಬ್ಬಂದಿಯಾಗಿದ್ದು, ಕಿರಿಯ ಮಗ ಅಬ್ದುಲ್ ಗಫೂರ್ ಮೌಲವಿ ಮಂಗಳೂರಿನ ಬಿಜೈನಲ್ಲಿ ಧರ್ಮ ಗುರುಗಳಾಗಿ ಸೇವೆ ಸಲ್ಲಿಸುವ ವೇಳೆ ಕೆಲವು ವರ್ಷಗಳ ಹಿಂದೆ ಮಂಗಳೂರು ಕೋಮು ಗಲಭೆ ಸಂದರ್ಭದಲ್ಲಿ ಧುಷ್ಕರ್ಮಿಗಳ ಚೂರಿ ಇರಿತಕ್ಕೆ ಬಲಿಯಾಗಿದ್ದರು. ಅಬೂಬಕ್ಕರ್ ಹಾಗು ಗಫೂರ್ ಮೌಲವಿ ಅವರಿಗೆ ಪೇರಡ್ಕ ಗೂನಡ್ಕ ಜುಮಾ ಮಸ್ಜಿದ್ ಖತೀಬ್ ನಂಹೀಮ್ ಫೈಝಿ ವಿಶೇಷ ಪ್ರಾರ್ಥನೆ ನೆರೆವೇರಿಸಿದರು, ಈ ಸಂದರ್ಭದಲ್ಲಿ ಸ್ಪೀಕರ್ ಯು ಟಿ ಖಾದರ್,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗು ಗೂನಡ್ಕ ಪೇರಡ್ಕ ಮೋಹಿದ್ದಿನ್ ಜುಮಾ ಮಸ್ಜಿದ್ ಅಧ್ಯಕ್ಷರಾದ ಟಿ. ಎಂ ಶಾಹಿದ್ ತೆಕ್ಕಿಲ್, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಸದಸ್ಯರಾದ ಎಂ ಆರ್ ಡಿ ಎ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ,ಸಂಪಾಜೆ ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ . ಹನೀಫ್ ಸಂಪಾಜೆ. ಹನೀಫ್ ಮೊಟ್ಟಂಗಾರ್ ,ಪೇರಡ್ಕ ಗೂನಡ್ಕ ಎಂ ಜೆ ಎಂ ಮಸೀದಿ ಕಾರ್ಯದರ್ಶಿ ಸಿನಾನ್ ಪುತ್ರಿ ಹಾಗು ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರದ್ದರು ಪೇರಡ್ಕ ಗೂನಡ್ಕ ಜುಮಾ ಮಸ್ಜಿದ್ ನಲ್ಲಿ ದಫನ ಮಾಡಲಾಯಿತು.