ಶ್ರೀಕ್ಷೇತ್ರ ಮಿತ್ತಮಜಲು ಮಾಡ ಬ್ರಹ್ಮಕಲಶ ಉತ್ಸವ-ಪೂರ್ವಭಾವಿ ಸಿದ್ಧತಾ ಸಭೆ…
ಬಂಟ್ವಾಳ: ಸಜೀಪ ಮಾಗಣೆ ಶ್ರೀ ಕ್ಷೇತ್ರ ಮಿತ್ತಮಜಲು ಮಾಡ ಬ್ರಹ್ಮಕಲಶ ಉತ್ಸವ ಮಾರ್ಚ್ 18 , 19 , 20 ರಂದು ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಸಾಂಸ್ಕೃತಿಕ ಸಭಾ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಇದರ ಪೂರ್ವಭಾವಿ ಸಿದ್ಧತಾ ಸಭೆ ಪರಿಸರದ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಹಾಗೂ ಗಣ್ಯರ ಉಪಸ್ಥಿತಿಯಲ್ಲಿನ0ದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ಕ್ಷೇತ್ರದಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿ ಗುತ್ತು ಅಧ್ಯಕ್ಷತೆಯಲ್ಲಿ ಜರಗಿತು.
ಮಾರ್ಚ್ 18ರಂದು ಮಾರನ ಬೈಲು ಜಂಕ್ಷನ್ ನಿಂದ ಸ್ವರ್ಣ ಬಿಂಬಗಳ ಆಯುಧಗಳ ಪಲ್ಲಕ್ಕಿ ಹಾಗೂ ಇತರ ಆಭರಣಗಳ ಹಾಗೂ ಹಸಿರು ವಾಣಿ ಹೊರೆ ಕಾಣಿಕೆ ಭವ್ಯ ಮೆರವಣಿಗೆ ಕ್ಷೇತ್ರಕ್ಕೆ ತಲುಪಲಿದ್ದು ತತ್ಸಂಬಂಧವಾಗಿ ಜರಗುವ ಅನ್ನದಾನ ಸಹಿತ ಎಲ್ಲಾ ಕಾರ್ಯಕ್ರಮಗಳಲ್ಲಿ ಊರ ಪರ ಊರ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಎಲ್ಲಾ ಭಕ್ತಾಭಿಮಾನಿಗಳಿಗೆ ಆಹ್ವಾನ ಪತ್ರ ತಲುಪುವಂತೆ ತನ್ಮೂಲಕ ವ್ಯವಸ್ಥಿತವಾದ ಕಾರ್ಯಕ್ರಮ ಜರಗಲುಎಲ್ಲರೂ ಸಹಕರಿಸುವಂತೆವಿನಂತಿಸಿದರು. ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಮಾತನಾಡಿ ಜೀವಮಾನದಲ್ಲಿ ಅಪರೂಪಕ್ಕೆ ಸಿಗುವ ಇಂತಹ ಪುಣ್ಯ ಕಾರ್ಯಕ್ರಮಗಳಲ್ಲಿ ಎಲ್ಲರೂ ತನು ಮನ ಧನ ಗಳಿಂದ ಸೇವೆ ಸಲ್ಲಿಸಿ ಶ್ರೀ ದೈವಂಗಳ ಪೂರ್ಣಾ ಅನುಗ್ರಹಕ್ಕೆ ಪಾತ್ರರಾಗಿ ಸಿರಿಮಡಿ ಗಂಧ ಪ್ರಸಾದ ಸ್ವೀಕರಿಸಿ ಧನ್ಯರಾಗುವಂತೆ ಎಲ್ಲರೂ ಭಾಗವಹಿಸಲು ಕರೆ ನೀಡಿದರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ದೇವಿ ಪ್ರಸಾದ್ ಪೂ0ಜ. ಸುಧೀರ್ ನಾಯಕ್ ದೇವಸ್ಥಾನದ ಪ್ರಬಂಧಕರಾದ ರಾಮಕೃಷ್ಣ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು ಚಂದ್ರಶೇಖರ್ ಶೆಟ್ಟಿ ಸ್ವಾಗತಿಸಿ ವ0ದಿಸಿದರು.





