ತಕ್ವೀಯತುಲ್ ಇಸ್ಲಾಂ ಮದ್ರಸ ಪೇರಡ್ಕ ಗೂನಡ್ಕ – 1496ನೇ ಈದ್ ಮಿಲಾದ್ ಆಚರಣೆ…

ಸುಳ್ಯ: ತೆಕ್ಕಿಲ್ ಮೊಹಮ್ಮದ್ ಹಾಜಿ ಸ್ಮರಣಾರ್ಥ ತಕ್ವೀಯತುಲ್ ಇಸ್ಲಾಂ ಮದ್ರಸ ಹಾಗು ಹಾಯಾತುಲ್ ಇಸ್ಲಾಮ್ ಮದ್ರಸ ಪೇರಡ್ಕ-ಗೂನಡ್ಕ ಮದರಸ ವಠಾರದಲ್ಲಿ ಪ್ರವಾದಿ ಪೈಗಂಬರ್ (ಸ ಅ) ರವರ 1496ನೇ ಜನ್ಮ ದಿನವನ್ನು ಅಧ್ಯಕ್ಷರಾದ ಎಸ್. ಆಲಿಹಾಜಿ ಯವರ ನೇತೃತ್ವದಲ್ಲಿ ದ್ವಜಾರೋಹಣದೊಂದಿಗೆ ಉದ್ಘಾಟನೆ ಮಾಡಿ ರಿಯಾಝ್ ಪೈಝಿ ಪೇರಡ್ಕ ಇವರ ನೇತೃತ್ವದಲ್ಲಿ ಹಜ್ರತ್ ವಳಿಯುಲ್ಲಾಹಿ ಪೇರಡ್ಕ ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆಗೈಯುವುದರ ಮೂಲಕ ಅ. 19 ರಂದು ಆಚರಿಸಲಾಯಿತು.
ಹಾಜಿ ಮೊಹಮ್ಮದ್ ತೆಕ್ಕಿಲ್ ಸಬಾಭವನದಲ್ಲಿ ಮಾತನಾಡಿದ ಟಿ. ಎಮ್ ಶಹೀದ್ ತೆಕ್ಕಿಲ್ ಇವರು ಪೈಗಂಬರ್ ರವರ ಚೆರ್ಯೆಯನ್ನು ಹಿಂಬಾಲಿಸಿ ಬದುಕಬೇಕು ಆಗ ಮಾತ್ರ ಒಂದು ಒಳ್ಳೆಯ ಮನುಶ್ಯನಾಗಲು ಸಾಧ್ಯವೆಂದು ಹೇಳಿ ಯುವಕರಿಗೆ ಸ್ಪೂರ್ತಿಯಾಗಿ ಮಾತನಾಡಿದರು.
ಸಂಪಾಜೆ ಗ್ರಾಮ ಪಂಚಾಯತ್ ಇದರ ಅಧ್ಯಕ್ಷ ಜಿ .ಕೆ ಹಮೀದ್ ರವರು ಪೈಗಂಬರ್ ಅವರ ಚೆರ್ಯೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರ., ನಂತರ ಮದ್ರಸ ಮಕ್ಕಳ ಹಲವಾರು ಸಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮಗಳು ಕೋವಿಡ್-19 ಇದರ ನಿಯಮಾನುಸಾರದಂತೆ ಸರಳವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು .
ವೇದಿಕೆಯಲ್ಲಿ ಅಧ್ಯಕ್ಷ ಎಸ್. ಆಲಿಹಾಜಿ , ಖತೀಬರಾದ ರಿಯಾಜ್ ಪೈಝಿ ಎಮ್ಮೆಮಾಡು, ಮುದರ್ರಿಸ್ ನೂರುದ್ಧಿನ್ ಅನ್ಸಾರಿ,ಹಾಜಿ ಇಬ್ರಾಹಿಂ ಕರಾವಳಿ, ಅಬ್ಬಾಸ್ ಪಾಂಡಿ ಮೊದಲಾದವರು ಉಪಸ್ಥಿತರಿದ್ಧರು.

3d6c25fc Bf68 4b2b A2ae 616b57fc5f98 300x217

242573b7 D4de 4bb0 9b1e Bac46a7bd0c4 300x225

Faaa37ca Bfa9 43d3 8abe Fc294132bf44 300x225

Related Articles