KCF ಸೊಹಾರ್ ವತಿಯಿಂದ ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ರಕ್ತದಾನ ಶಿಬಿರ…

ಕರ್ನಾಟಕ ಕಲ್ಚರಲ್ ಫೌಂಡೇಷನ್ KCF ಒಮಾನ್ ಸೊಹಾರ್ ಝೋನ್ ವತಿಯಿಂದ ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 19 ರಂದು ಮಿನಿಸ್ಟರಿ ಆಫ್ ಹೆಲ್ತ್ ಬುರೈಮಿ ಹಾಸ್ಪಿಟಲ್ ಇವರ ಸಂಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು.
ಶಿಬಿರದದಲ್ಲಿ ಸಂಯೋಜಕರಾಗಿ ಬುರೈಮಿ ಹಾಸ್ಪಿಟಲ್ ಡಾ. ಮುಹಮ್ಮದ್ ನೌಫಲ್, ಅಥರ್ ಹುಸೇನ್ ಹಾಗೂ ಸಿಂಬಂದಿಗಳು ಸಹಕರಿಸಿದರು. ಕಾರ್ಯಕ್ರಮದಲ್ಲಿ ಕೆಸಿಎಫ್ ಒಮಾನ್ ಸಾಂತ್ವನ ವಿಭಾಗದ ಅಧ್ಯಕ್ಷ ಇಕ್ಬಾಲ್ ಎರ್ಮಾಳ್ , ಕೆಸಿಎಫ್ ಒಮಾನ್ ಮೀಡಿಯಾ ವಿಭಾಗದ ಅಧ್ಯಕ್ಷ ಸಿದ್ದೀಕ್ ಮಾಂಬ್ಲಿ ಸುಳ್ಯ, ಕೆಸಿಎಫ್ ಸೊಹಾರ್ ಝೋನ್ ಅಧ್ಯಕ್ಷ ಉಮರ್ ಫಾರೂಕ್ ಕುಕ್ಕಾಜೆ ,ಪ್ರಧಾನ ಕಾರ್ಯದರ್ಶಿ ಮುಬೀನ್ ಜೋಕಟ್ಟೆ, ಸಂಘಟನಾ ಅಧ್ಯಕ್ಷ ಅಶ್ರಫ್ ಕುತ್ತಾರ್, ಮೀಡಿಯಾ ಕಾರ್ಯದರ್ಶಿ ನಝೀರ್ ಸಾರ್ಯ , ರಫೀಕ್ ಕಕ್ಕಿಂಜೆ, ಹೈದರ್ ಬಂಟ್ವಾಳ, ಬುರೈಮಿ ಸೆಕ್ಟರ್ ಅಧ್ಯಕ್ಷ ಅಶ್ರಫ್ ಕರೋಪಾಡಿ, ಪ್ರಧಾನ ಕಾರ್ಯದರ್ಶಿ ಮಜೀದ್ ಕರೋಪಾಡಿ, ಕೋಶಾಧಿಕಾರಿ ಹಮೀದ್ ಸಾಲೆತ್ತೂರು ಉಪಸ್ಥಿತರಿದ್ದರು. ನಂತರ ಕೆಸಿಎಫ್ ಸೊಹಾರ್ ಝೋನ್ ಶಿಕ್ಷಣ ವಿಭಾಗದ ಅಧ್ಯಕ್ಷ ಇಕ್ಬಾಲ್ ಮದನಿ ಇವರ ನೇತೃತ್ವದಲ್ಲಿ ಮಹ್ಲರತುಲ್ ಬದ್ರಿಯ ಮಜ್ಲಿಸ್ ಹಮೀದ್ ಅವರ ನಿವಾಸದಲ್ಲಿ ನಡೆಯಿತು.