ಮೂಡುಬಿದಿರೆಯಲ್ಲಿ ಕೋಟಿಗೀತಾ ಲೇಖನ ಯಜ್ಞಕ್ಕೆ ಚಾಲನೆ…
ಮೂಡುಬಿದಿರೆ: ಉಡುಪಿ ಶ್ರೀಪುತ್ತಿಗೆ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಗುಣೇಂದ್ರ ಶ್ರೀಪಾದರ ಚತುರ್ಥ ಪರ್ಯಾಯದ ಪಂಚಮಹಾಯೋಜನೆಗಳಲ್ಲಿ ಒಂದು ಜಾಗತಿಕ ಧಾರ್ಮಿಕ ಆಂದೋಲನವೆಂದೇ ಬಿಂಬಿತವಾಗಿರುವ ಕೋಟಿಗೀತಾ ಲೇಖನ ಯಜ್ಞ. ಇದು ಜೀವನದಲ್ಲಿ ಒಮ್ಮೆ ಮಾತ್ರಾ ಲಭಿಸಬಹುದಾದ ಪುಣ್ಯಾವಕಾಶ, ಆದ್ದರಿಂದ ನಾವೆಲ್ಲರೂ ಭಗವದ್ಗೀತೆಯನ್ನು ಒಂದು ಸಲ ಸಂಪೂರ್ಣವಾಗಿ ಬರೆದು ಶ್ರೀಗಳ ಮೂಲಕ ಶ್ರೀಕೃಷ್ಣನಿಗರ್ಪಿಸಿ, ಪ್ರಸಾದರೂಪವಾಗಿ ನಾವು ಬರೆದ ಗ್ರಂಥಗಳನ್ನೇ ಸ್ವೀಕರಿಸಿ ಕೃತಾರ್ಥರಾಗೋಣ ಎಂದು ದ ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ ಹೇಳಿದರು.
ಮೂಡುಬಿದಿರೆಯ ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ ಆಯೋಜಿಸಿದ 36 ನೇ ವರ್ಷದ ಮೊಸರುಕುಡಿಕೆಯ ಸಾಂಸ್ಕೃತಿಕ ಕಲಾಪಗಳ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು ವೇದಿಕೆಯ ಗಣ್ಯರಿಗೆ , ಸಾಧಕರಿಗೆ ಕೋಟಿಗೀತಾ ಲೇಖನ ಯಜ್ಞದ ಹೊತ್ತಗೆಗಳನ್ನು ನೀಡಿ ಮಾತನಾಡಿದರು.
ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷ ಗಣೇಶ್ ರಾವ್, ಸಂಚಾಲಕ ಸಂತೋಷ್ ಕುಮಾರ್ ಸಹಿತ 35 ಯಜ್ಞಕರ್ತರನ್ನು ನೊಂದಾಯಿಸಲಾಯಿತು.
ವೇದಿಕೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ| ಎಂ ಮೋಹನ ಆಳ್ವ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ, ಉದ್ಯಮಿ ಕೆ. ಶ್ರೀಪತಿ ಭಟ್,ಶ್ರೀಕೃಷ್ಣ ಪ್ರಶಸ್ತಿ ಪುರಸ್ಕೃತ ವಿಶ್ವನಾಥ ಪ್ರಭು, ಗೌರವ ಪುರಸ್ಕಾರ ಪಡೆದ ಇರುವೈಲು ತಾರಾನಾಥ ಪೂಜಾರಿ, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಉದ್ಯಮಿಗಳಾದ ಐ. ರಾಘವೇಂದ್ರ ಪ್ರಭು ಮತ್ತು ಪ್ರಭಾತ್ ಚಂದ್ರ ಜೈನ್, ಕರ್ನಾಟಕ ಬ್ಯಾಂಕ್ ನ ಪೂರ್ವ ಜನರಲ್ ಮ್ಯಾನೇಜರ್ ಚಂದ್ರಶೇಖರ್ ರಾವ್ ಬೊಕ್ಕಸ, ಪೊನ್ನೆಚಾರಿ ದೇವಳದ ಆಡಳಿತ ಮೊಕ್ತೇಸರ ಅಶೋಕ ಕಾಮತ್, ಸಂಸ್ಥೆಯ ಗೌರವಾಧ್ಯಕ್ಷ ಪ್ರಮತ್ ಕುಮಾರ್ ಉಪಸ್ಥಿತರಿದ್ದರು.
ಮೂಡುಬಿದಿರೆಯಚೇತನ ಮೆಡಿಕಲ್ಸ್ ಅಥವಾ ಸಮಾಜ ಮಂದಿರ ಕಾಂಪ್ಲೆಕ್ಸ್ ನಲ್ಲಿರುವ ಜಯರಾಮ್ ಟೀ ಟ್ರೇಡರ್ಸ್ ನ ಪಿ.ರಾಜಾರಾಮ ಭಟ್ (6364750057) ಅವರಲ್ಲಿ ಕೋಟಿಗೀತಾ ಲೇಖನ ಯಜ್ಞಕರ್ತರಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಸಂಕರ್ಷಣ ಪ್ರಖಂಡದ ಗೀತಾಪ್ರಚಾರಕ ಕೆ. ವಿ. ರಮಣ್ ತಿಳಿಸಿದ್ದಾರೆ.