ಮಿತ್ತಮಜಲು ಕ್ಷೇತ್ರ ಬ್ರಹ್ಮ ಕಲಶೋತ್ಸವ- ಮಹಿಳಾ ಸಮಿತಿ ಸಭೆ…
ಬಂಟ್ವಾಳ: ಶ್ರೀ ಸಜೀಪ ಮಾಗಣೆ ಮಿತ್ತಮಜಲು ಕ್ಷೇತ್ರ ಬ್ರಹ್ಮ ಕಲಶೋತ್ಸವ ನಿಮಿತ್ತ ಮಹಿಳಾ ಸಮಿತಿ ಸಭೆ ಅನ್ನಪಾಡಿ ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಜರಗಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮದ ವಿವರ ನೀಡಿದರು. ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಯಶವಂತ ದೇರಾಜೆಗುತ್ತು ಮಹಿಳೆಯರ ಜವಾಬ್ದಾರಿ ಬಗ್ಗೆ ವಿವರಿಸಿದ್ದರು. ಮಹಿಳಾ ಸಮಿತಿ ಅಧ್ಯಕ್ಷೆ ವಿಜಯ, ಪ್ರಮುಖರಾದ ರಮೇಶ್ ಅಣ್ಣಪ್ಪಾಡಿ, ಜಯಪ್ರಕಾಶ್ ಪೆರುವ, ಲಿಂಗಪ್ಪ ದೋಟ, ಕೆ ಸದಾನಂದ ಶೆಟ್ಟಿ, ವಿಶ್ವನಾಥ ಬೆಳ್ಚಡ, ರತ್ನಾಕರ ನಾಡಾರ್, ಪ್ರಶಾಂತ್, ಹರೀಶ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.




