ಶ್ರೀ ಬಾಲಗಣಪತಿ ದೇವಸ್ಥಾನ ಅನ್ನಪ್ಪಾಡಿ – ಎಂ ಸುಬ್ರಹ್ಮಣ್ಯ ಭಟ್ ಅವರಿಗೆ ಸನ್ಮಾನ…

ಬಂಟ್ವಾಳ: ಶ್ರೀ ಬಾಲಗಣಪತಿ ದೇವಸ್ಥಾನ ಅನ್ನಪ್ಪಾಡಿ ಸಜೀಪಮೂಡ ಬಂಟ್ವಾಳ ಇದರ ನವೀಕರಣ ಅಷ್ಟಬಂಧ ಪುನಃ ಪ್ರತಿಷ್ಠಾಪನ ಬ್ರಹ್ಮಕಲಶೋತ್ಸವ ಹಾಗೂ ಪ್ರಥಮ ಜಾತ್ರಾ ಮಹೋತ್ಸವದ ಸುಧರ್ಮ ಸಭೆಯಲ್ಲಿ ಸಜಿಪಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಅವರನ್ನು ದೇವಳದ ವತಿಯಿಂದ ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಕೆ ಪ್ರಭಾಕರ್ ಭಟ್ ಫಲಪುಷ್ಪ ತಾಂಬೂಲ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಗೆಜ್ಜೆಗಿರಿ ಕ್ಷೇತ್ರದ ಜಯಂತ ನಡುಬೈಲ್, ಶ್ರೀಶಾರದಾ ಗಣಪತಿ ವಿದ್ಯಾಸಂಸ್ಥೆಯ ಟಿಜಿ ರಾಜಾರಾಮ್ ಭಟ್, ನಮ್ಮ ಕುಡ್ಲ ವಾಹಿನಿಯ ಲೋಲಾಕ್ಷ ಕರ್ಕೇರ, ಉದ್ದಿಮೆದಾರರಾದ ಮೋನಪ್ಪ ನಾಡಾರ್, ಜನಾರ್ದನ ಪೂಜಾರಿ ಪದಡ್ಕ, ರವಿ ಪೂಜಾರಿ ಚಿಲಿಂಬಿ, ಕೆನರಾ ಬ್ಯಾಂಕ್ ಮ್ಯಾನೇಜರ್ ಪುರಂದರ, ನವ ಮುಂಬೈ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಪ್ರೇಮ ಜಿ ಶೆಟ್ಟಿ, ಪದ್ಮಾವತಿ ಪೂಜಾರಿ, ಕೆ ಸದಾನಂದ ಶೆಟ್ಟಿ, ಎಸ್ ಶ್ರೀಕಾಂತ್ ಶೆಟ್ಟಿ, ಯಶವಂತ ದೇರಾಜೆ ಗುತ್ತು ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button