ಶ್ರೀಕೃಷ್ಣ ಮಂದಿರ ಅಮ್ಟೂರು – 22ನೇ ವರ್ಷದ ವಾರ್ಷಿಕೋತ್ಸವ…

ಬಂಟ್ವಾಳ: ಶ್ರೀಕೃಷ್ಣ ಮಂದಿರ ಅಮ್ಟೂರು ಇದರ 22ನೇ ವರ್ಷದ ವಾರ್ಷಿಕೋತ್ಸವ ಡಿ. 29ರಂದು ಶ್ರೀ ಕೃಷ್ಣ ಮಂದಿರ, ನವಜ್ಯೋತಿ ಮಿತ್ರಮಂಡಳಿ ಹಾಗೂ ಜ್ಯೋತಿ ಮಹಿಳಾ ಮಂಡಲದ ಸಂಯುಕ್ತ ಆಶ್ರಯದಲ್ಲಿ ಮಂದಿರದ ಸಭಾಂಗಣದಲ್ಲಿ ನಡೆಯಿತು.
ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ ಮತ್ತು ಮಧ್ಯಾಹ್ನ ಸಭಾಕಾರ್‍ಯಕ್ರಮ ಜರಗಿತು.
ಈ ಸಭೆಯನ್ನು ಗಮನಿಸಿದಾಗ ಇಲ್ಲೊಂದು ಶಕ್ತಿ ಅಡಕವಾಗಿದೆ. ಇದು ಇನ್ನೂ ಎತ್ತರಕ್ಕೆ ಬೆಳೆಯುತ್ತದೆ ಎಂದು ಪೂಜ್ಯ ಸ್ವಾಮೀಜಿಯವರಾದ ತಪೋನಿಧಿ ನಾಗಸಾಧು ಬಾಬಾ ಶ್ರೀ ವಿಠಲಗಿರಿ ಮಹಾರಾಜ್ ಹರಿದ್ವಾರ ಇವರು ಕಾರ್‍ಯಕ್ರಮದಲ್ಲಿ ಉಪಸ್ಥಿತರಿದ್ದು ಆಶೀರ್ವಚನ ಮಾತುಗಳನ್ನಾಡಿದರು.
ಕೊರೋನಾ ಮಹಾಮಾರಿಯಿಂದ ಆನ್‌ಲೈನ್ ತರಗತಿಗಾಗಿ ಮಕ್ಕಳ ಕೈಯಲ್ಲಿ ಮೊಬೈಲ್ ಬಂದಿದೆ. ಆದರೆ ಈ ಮೊಬೈಲ್ ಮಕ್ಕಳ ಕೈಯಲ್ಲಿ ಇರುವುದು ಇನ್ನೂ ಅಪಾಯಕಾರಿಯಾಗಿದೆ. ಈಗಾಗಲೇ ಶಾಲೆಗಳು ಪ್ರಾರಂಭವಾಗಿದೆ. ತಮ್ಮ ಮನೆಯ ಮಕ್ಕಳ ಕೈಯಲ್ಲಿರುವ ಮೊಬೈಲ್ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಎಂದು ಮಾಜಿ ಶಾಸಕರಾದ ಶ್ರೀ ಪದ್ಮನಾಭ ಕೊಟ್ಟಾರಿ ತಿಳಿಸಿದರು.
ಕಾರ್‍ಯಕ್ರಮದ ಪ್ರಾರಂಭದಲ್ಲಿ ಮಂದಿರದ ಕಾರ್‍ಯಕರ್ತರಾಗಿದ್ದ ಇತ್ತೀಚೆಗೆ ನಿಧನ ಹೊಂದಿರುವ ನಿವೃತ್ತ ಯೋಧ ಶ್ರೀನಿವಾಸ ಶೆಟ್ಟಿ ಬಾಳಿಕೆ ಮತ್ತು ನೋಣಯ್ಯ ಪೂಜಾರಿ ಇವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಭಾರತೀಯ ಸೇನೆಯಲ್ಲಿ ೨೪ವರ್ಷ ಸೇವೆ ಸಲ್ಲಿಸಿ ಕಂಪೆನಿ ಹವಾಲ್ದಾರ್ ಮೇಜರ್ ಆಗಿದ್ದ ಇತ್ತೀಚೆಗೆ ನಿವೃತಿ ಹೊಂದಿರುವ ಭಾಸ್ಕರ ಅಮ್ಟೂರು, ಜೂಡೋ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದಿರುವ ನಿಶಿತ್ ಪೂಜಾರಿ ಹಾಗೂ ಮಂದಿರಕ್ಕೆ ಯು.ಪಿ.ಎಸ್ ಕೊಡುಗೆ ನೀಡಿದ ಕುಸುಮ ಎಸ್.ಡಿ. ಬಟ್ಟಹಿತ್ಲು ಇವರನ್ನು ಕಾರ್‍ಯಕ್ರಮದಲ್ಲಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕರು ಹಾಗೂ ಅಗ್ರಜ ಬಿಲ್ಡರ್‍ಸ್ ಮಂಗಳೂರು ಇದರ ಮಾಲಕರಾದ ಶ್ರೀ ಸಂದೇಶ್ ಶೆಟ್ಟಿ, ಚೌಟ ಇಂಡೇನ್ ಗ್ಯಾಸ್ ಡಿಸ್ಟ್ರಿಬೂಟರ್‍ಸ್, ಚೌಟ ಕಾಂಪ್ಲೆಕ್ಸ್, ಫರಂಗಿಪೇಟೆ ಇದರ ಮಾಲಕರು ಬಿ. ಜಗನ್ನಾಥ ಚೌಟ, ಜ್ಯೋತಿ ಮಹಿಳಾ ಮಂಡಲದ ಅಧ್ಯಕ್ಷೆ ಲಕ್ಷ್ಮೀ ಪ್ರಭು ಉಪಸ್ಥಿತರಿದ್ದರು. ಮೂಕಾಂಬಿಕಾ ಕನ್‌ಸ್ಟ್ರಕ್ಷನ್, ಮಂಗಳೂರು ಇದರ ಅಧ್ಯಕ್ಷರು ಹಾಗೂ ಬಿ.ಜೆ.ಪಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾಗಿರುವ ಚಂದ್ರಹಾಸ ಪಂಡಿತ್ ಹೌಸ್ ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಮಂದಿರದ ಕಾರ್‍ಯದರ್ಶಿ ಕುಶಾಲಪ್ಪ ಅಮ್ಟೂರು ಸ್ವಾಗತಿಸಿದರು. ಮಂದಿರದ ಅಧ್ಯಕ್ಷರಾದ ರಮೇಶ್ ಕರಿಂಗಾಣ ಧನ್ಯವಾದ ಮಾಡಿದರು. ರಾಜೇಶ್ ಕೊಟ್ಟಾರಿ ಕಾರ್‍ಯಕ್ರಮವನ್ನು ನಿರ್ವಹಿಸಿದರು.
ಪೂಜ್ಯ ಸ್ವಾಮೀಜಿಯವರನ್ನು ಹಾಗೂ ಗಣ್ಯ ಅತಿಥಿಗಳನ್ನು ಅಮ್ಟೂರು ಜಂಕ್ಷನ್‌ನಿಂದ ಚೆಂಡೆ, ಬ್ಯಾಂಡ್ ವಾದನನಗಳ ಮೂಲಕ ಕರೆತರಲಾಯಿತು. ಮಹಿಳಾ ಮಂಡಲದ ಸದಸ್ಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ಸಭಾಕಾರ್‍ಯಕ್ರಮದ ಬಳಿಕ ವಿಠಲ್ ನಾಯಕ್ ಮತ್ತು ತಂಡದವರಿಂದ ಗೀತಾ ಸಾಹಿತ್ಯ ಸಂಭ್ರಮ, ನಂತರ ಸಂಜೆ 4ಗಂಟೆಗೆ ಸಸಿಹಿತ್ಲು ಶ್ರೀ ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು, ಮಂಗಳೂರು ಇವರಿಂದ ಶ್ರೀ ಭಗವತೀ ಮಹಾತ್ಮೆ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಿತು.

Sponsors

Related Articles

Back to top button