ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ- ಸಾಮೂಹಿಕ ಶ್ರೀ ರುದ್ರಪಠಣ ಕಾರ್ಯಕ್ರಮ…

ಬಂಟ್ವಾಳ: ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪಮೂಡ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು (ತ್ರಿಮತಸ್ಥ ) ಪರಿಷತ್ತು ಬಂಟ್ವಾಳ ಇದರ ವತಿಯಿಂದ ಸಾಮೂಹಿಕ ಶ್ರೀ ರುದ್ರಪಠಣ ಕಾರ್ಯಕ್ರಮ ದೇವಾಲಯದಲ್ಲಿ ಜರಗಿತು.
ಜಿಲ್ಲಾಧ್ಯಕ್ಷರ ಕೆ ಕೃಷ್ಣರಾಜ ಭಟ್ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಹೊಳ್ಳ, ಜಿಲ್ಲಾ ಸಂಯೋಜಕ ಶ್ರೀ ರಂಗ ಐತಾಳ, ತಾಲೂಕು ಅಧ್ಯಕ್ಷ ಎನ್ ಶಿವರಾಮ ಮಯ್ಯ, ತಾಲೂಕು ಸಂಯೋಜಕ ಎಂ ಸುಬ್ರಹ್ಮಣ್ಯ ಭಟ್ ಮೊದಲಾದವರು ಉಪಸ್ಥಿತರಿದ್ದರು.