ಜುಲೈ 9 – ಮರವೂರಿನಲ್ಲಿ ‘ಮರಿಯಲದ ಮಿನದನ’…

ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಸಭೆಯಲ್ಲಿ ಎ. ಸದಾನಂದ ಶೆಟ್ಟಿ ಘೋಷಣೆ…

ಮಂಗಳೂರು: ‘ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಆಶ್ರಯದಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಜರಗುವ ತುಳುವರ ಮೋಜು – ಮಸ್ತಿಯ ಕಾರ್ಯಕ್ರಮ ‘ಮರಿಯಲದ ಮಿನದನ’ ವನ್ನು ಈ ಬಾರಿ ಜುಲೈ 9ರಂದು ಭಾನುವಾರ ಮರವೂರು ನದಿ ಕಿನಾರೆಯ ಗ್ರಾಂಡ್ ಬೇ ಆವರಣದಲ್ಲಿ ಏರ್ಪಡಿಸಲಾಗಿದೆ’ ಎಂದು ಟ್ರಸ್ಟ್ ಸ್ಥಾಪಕಾಧ್ಯಕ್ಷ ಎ.ಸದಾನಂದ ಶೆಟ್ಟಿ ಹೇಳಿದ್ದಾರೆ.
ನಗರದ ಬಲ್ಮಠ ಕುಡ್ಲ ಪೆವಿಲಿನ್ ನ ಸದಾಶಯ ಕಚೇರಿಯಲ್ಲಿ ಜರಗಿದ ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಪೂರ್ವಭಾವಿ ಸಭೆಯಲ್ಲಿ ಅವರು ಈ ವಿಷಯವನ್ನು ಪ್ರಕಟಿಸಿದರು.
‘ ತುಳುನಾಡಿನಲ್ಲಿ ಎಲ್ಲ ಋತುಗಳಲ್ಲೂ ವಿಶೇಷವಾದ – ಹಬ್ಬ ಆಚರಣೆಗಳು ನಡೆಯುತ್ತವೆ. ಸಂಸ್ಕೃತಿ – ಸಂಪ್ರದಾಯ, ಆಚಾರ – ವಿಚಾರ, ಆಟ – ಕೂಟ ಮತ್ತು ತಿಂಡಿ – ತಿನಿಸುಗಳಲ್ಲಿ ತುಳು ಜನರ ಪ್ರಾದೇಶಿಕ ಅನನ್ಯತೆ ಕಂಡುಬರುತ್ತದೆ. ಅವುಗಳನ್ನು ಯುವ ಸಮುದಾಯಕ್ಕೆ ಪರಿಚಯಿಸುವ ಸಲುವಾಗಿ ಕಾಲಕಾಲಕ್ಕೆ ಇಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ’ ಎಂದವರು ತಿಳಿಸಿದರು.
ಕಾರ್ಯಕ್ರಮ ವೈವಿಧ್ಯ:
ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯಲಕ್ಷ್ಮಿ ಬಿ. ಶೆಟ್ಟಿ ಮಾತನಾಡಿ ‘ಮಿನದನದಲ್ಲಿ ತುಳುನಾಡಿನ ವಿವಿಧ ಬಗೆಯ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿದ್ದು ಅದರಲ್ಲಿ ಸಮುದಾಯದ ಎಲ್ಲರೂ ಪಾಲ್ಗೊಳ್ಳುವಂತೆ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದೆ; ಇದರೊಂದಿಗೆ ಮಹಿಳೆಯರಿಗೆಂದೇ ಪ್ರತ್ಯೇಕ ಆಟಗಳನ್ನು ಸ್ಪರ್ಧಾ ರೂಪದಲ್ಲಿ ಸಂಘಟಿಸಲಾಗುವುದು’ ಎಂದರು.
ಸಂಘಟನಾ ಕಾರ್ಯದರ್ಶಿ ರಾಜಗೋಪಾಲ ರೈ ಅವರು ದಿನವಿಡೀ ನಡೆಯುವ ಕಾರ್ಯಕ್ರಮಗಳು, ಭಾಗವಹಿಸುವ ಅತಿಥಿಗಳು ಹಾಗೂ ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸುವ ಬಗ್ಗೆ ವಿವರ ನೀಡಿದರು. ಪ್ರಮುಖರಾದ ಸುರೇಶ್ಚಂದ್ರ ಶೆಟ್ಟಿ, ಮತ್ತು ಮದಲಾಕ್ಷಿ ರೈ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಭೆಯಲ್ಲಿ ಪಾಲ್ಗೊಂಡ ಕೆಲವು ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಕಾರ್ಯಾಧ್ಯಕ್ಷ ದೇವಿ ಚರಣ್ ಶೆಟ್ಟಿ ಸ್ವಾಗತಿಸಿದರು. ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ವಂದಿಸಿದರು. ಮಹಿಳಾ ವಿಭಾಗದ ಆರತಿ ಆಳ್ವ ನಿರೂಪಿಸಿದರು.

whatsapp image 2023 06 22 at 6.35.57 am
whatsapp image 2023 06 22 at 6.35.58 am
Sponsors

Related Articles

Back to top button