ಆಜಾದಿ ಕಾ ಅಮೃತ್ ಮಹೋತ್ಸವ…

ಬಂಟ್ವಾಳ: 75 ನೇ ದಿನೋತ್ಸವದ ನೆನಪಿಗಾಗಿ ಫಿಟ್ ಇಂಡಿಯಾ ಮಿಷನ್, ಫಿಟ್ ಇಂಡಿಯಾ ಫ್ರೀಡಂ-2 .0 ಇದರ ಪರಿಕಲ್ಪನೆಯೊಂದಿಗೆ ‘ಆಜಾದಿ ಕಾ ಅಮೃತ್ ಮಹೋತ್ಸವ’ ಕಾರ್ಯಕ್ರಮ ಶ್ರೀರಾಮ ಫ್ರೌಢಶಾಲೆಯಲ್ಲಿ ನಡೆಯಿತು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಧ್ವಜ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಹಿರಣ್ಮಯಿ, ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಸಹ ಸಂಚಾಲಕ ರಮೇಶ್ ಎನ್., ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ ಕಟ್ಟೆ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶಾಂಭವಿ ಹಾಗೂ ಎಲ್ಲಾ ಅಧ್ಯಾಪಕ, ಅಧ್ಯಾಪಕೇತರರು ಉಪಸ್ಥಿತರಿದ್ದರು.

Related Articles

Back to top button