ಸಂಪಾಜೆ ಪೇರಡ್ಕ ಗೂನಡ್ಕ ಮಸೀದಿಗೆ ಬಿ ಎಂ ಫಾರೂಕ್ ಭೇಟಿ…
ಸುಳ್ಯ: ಸಂಪಾಜೆ ಗ್ರಾಮದ ಪೇರಡ್ಕ ದರ್ಗಾ ಹಾಗೂ ನವೀಕಾರಣಗೊಂಡ ಮೋಹಿದ್ದಿನ್ ಜುಮಾ ಮಸೀದಿಗೆ ಜನತಾ ದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಧಾನಪರಿಷತ್ ಸದಸ್ಯರಾದ ಬಿ. ಎಂ. ಫಾರೂಕ್ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ ದರ್ಗಾ ಝಿಯಾರತ್ ಹಾಗು ಮಸೀದಿಯಲ್ಲಿ ವಿಶೇಷ ದುವಾ ಮಾಡಿದರು.
ಈ ಸಂದರ್ಭದಲ್ಲಿ ಅವರನ್ನು ಜಮಾತಿನ ಪರವಾಗಿ ಕರಾವಳಿ ಇಬ್ರಾಹಿಂ ಹಾಜಿ ಸನ್ಮಾನಿಸಿದರು. ಪುರಾತನ ಮಸೀದಿ,ದರ್ಗಾ, ಪ್ರವಾಸಿ ಮಂದಿರ, ರಸ್ತೆ, ಕಾಂಪೌಂಡ್, ತೆಕ್ಕಿಲ್ ಮೊಹಮ್ಮದ್ ಹಾಜಿ ಮೆಮೋರಿಯಲ್ ತಖ್ವಿಯತುಲ್ ಇಸ್ಲಾಂ ಮದರಸ, ಮಸೀದಿಯ ರಬ್ಬರ್ ತೋಟವನ್ನು ವೀಕ್ಷಿಸಿ ಅದ್ಭುತ ಕೆಲಸ ಆಗಿದೆ ಎಂದು ಪುರಾತನ ಮಸೀದಿಯ ಹಾಗು ಇತಿಹಾಸದ ಬಗ್ಗೆ ಮಾಹಿತಿ ಹಂಚಿಕೊಂಡರು. ಸಂಪಾಜೆ ಗ್ರಾಮ ಪಂಚಾಯತ್ ಪರವಾಗಿ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ಸನ್ಮಾನಿಸಿದರು. ಎರಡು ಬಾರಿ ಗಾಂಧಿ ಪುರಸ್ಕಾರ ಸಿಕ್ಕಿದ ಬಗ್ಗೆ ಅಭಿನಂದಿಸಿ ಅವರಿಗೆ ರಾಷ್ಟ್ರ ಪ್ರಶಸ್ತಿ ಬರಲಿ ಎಂದು ಹಾರೈಸಿ ಕೆಲಸವನ್ನು ಶ್ಲಾಘಸಿ ಅಭಿನಂದಿಸಿದರು.
ಟಿ ಎಂ ಶಾಹಿದ್ ತೆಕ್ಕಿಲ್ ಮತ್ತು ಅವರ ಪೂರ್ವಜರು ಕುಟುಂಬಸ್ಥರು ಮಾಡಿದ ಸೇವೆ, ಅಭಿವೃದ್ಧಿ ಮತ್ತು ಕೊಡುಗೆ ಬಗ್ಗೆ ನನಗೆ ಅಭಿಮಾನ ಇದೆ. ಅವರಿಗೆ ಉನ್ನತ ಹುದ್ದೆ ಸಿಗಬೇಕಿತ್ತು ಮುಂದೆ ಒಳ್ಳೆಯ ಅಧಿಕಾರ ಸಿಗಲಿ ಎಂದು ಹಾರೈಸಿದರು.
ದರ್ಕಾಸ್ ಅಂಗನವಾಡಿಗೆ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ನೀಡಿದ್ದಕ್ಕೆ ಸ್ಥಳೀಯ ಪಂಚಾಯತ್ ಸದಸ್ಯರಾದ ಅಬೂಸಾಲಿ ಗೂನಡ್ಕ ಎಸ್ ಕೆ ಹನೀಫ್ ಸಂಪಾಜೆ ಸನ್ಮಾನಿಸಿದರು. ಮುಂದೆ ಕೂಡ ಅನುದಾನ ಮತ್ತು ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರು, ಮಸೀದಿ ನವೀಕರಣ ಸಮಿತಿಯ ಮತ್ತು ಊರೂಸ್ ಸಮಿತಿ ಅಧ್ಯಕ್ಷರಾದ ಟಿ. ಎಂ. ಶಾಹಿದ್ ತೆಕ್ಕಿಲ್ , ಪೇರಡ್ಕ ಜುಮಾ ಮಸ್ಜಿದ್ ಕಾರ್ಯದರ್ಶಿ ರಝಕ್ ಹಾಜಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಬೂಸಾಲಿ ಗೂನಡ್ಕ, ಎಸ್. ಕೆ. ಹನೀಫ್ ಸಂಪಾಜೆ, ಹಾಜಿ ಇಬ್ರಾಹಿಂ ಮೈಲ್ಕಲ್ಲು, ಬಿ ಎಂ ಶೌಕತ್, ಫರ್ವೈ ಸ್, ಸಿದ್ದಿಕ್ ಕೊಕ್ಕೋ, ಜಿಲ್ಲಾ ವಖ್ಫ್ ಬೋರ್ಡ್ ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಮೊಗರ್ಪಣೆ,ಜನತಾ ದಳದ ಮುಖಂಡ ಹನೀಫ್ ಮೊಟ್ಟನ್ಗಾರ್, ಜಮಾಯತ್ ಸದಸ್ಯರು, ಊರೂಸ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.