ತೆಕ್ಕಿಲ್ ಗೆ ವಿಧಾನಪರಿಷತ್ ಸದಸ್ಯ ಬಿ ಎಂ ಫಾರೂಕ್ ಭೇಟಿ…
ಸುಳ್ಯ: ಜನತಾದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಧಾನಪರಿಷತ್ ಸದಸ್ಯರಾದ ಬಿ. ಎಂ. ಫಾರೂಕ್ ಅವರು ತೆಕ್ಕಿಲ್ ಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಅವರನ್ನು ಪ್ರತಿಷ್ಠಾನದ ಪರವಾಗಿ ಟಿ ಎಂ ಶಾಹಿದ್ ತೆಕ್ಕಿಲ್, ಕಾರ್ಯದರ್ಶಿ ಆರಂತೋಡು ಮಸೀದಿಯ ಅಧ್ಯಕ್ಷರಾದ ಅಶ್ರಫ್ ಗುಂಡಿ ಹಾಗು ಖಜಾಂಜಿ ಟಿ ಎಂ ಜಾವೆದ್ ತೆಕ್ಕಿಲ್ ಸನ್ಮಾನಿಸಿದರು.
ತೆಕ್ಕಿಲ್ ಮೊಹಮ್ಮದ್ ಹಾಜಿ ಮತ್ತು ಕುಟುಂಬಸ್ಥರಿಂದ ಸಮಾಜದಲ್ಲಿ ಶ್ಲಾಘನೀಯ ಕೆಲಸ ಆಗಿದೆ. ಟಿ ಎಂ ಶಾಹಿದ್ ತೆಕ್ಕಿಲ್ ಮತ್ತು ಅವರ ಪೂರ್ವಜರು, ಕುಟುಂಬಸ್ಥರು ಮಾಡಿದ ಸೇವೆ ಅಭಿವೃದ್ಧಿ ಮತ್ತು ಕೊಡುಗೆ ಬಗ್ಗೆ ನನಗೆ ಅಭಿಮಾನ ಇದೆ. ಅವರಿಗೆ ಉನ್ನತ ಹುದ್ದೆ ಸಿಗಬೇಕಿತ್ತು ಮುಂದೆ ಒಳ್ಳೆಯ ಅಧಿಕಾರ ಸಿಗಲಿ ಎಂದು ಹಾರೈಸಿದರು. ಈ ರಸ್ತೆಯಲ್ಲಿ ಹಲವು ಬಾರಿ ಪ್ರಯಾಣ ಮಾಡಿದಾಗ ಈ ಮನೆ ವೀಕ್ಷಿಸಿದ್ದೆ. ಇಂದು ಇಲ್ಲಿಗೆ ಭೇಟಿ ನೀಡುವ ಅವಕಾಶ ಆಯಿತು. ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಪೊಲೀಸ್ ಅಧಿಕಾರಿ ದಿವಂಗತ ಸಿ ಎಂ ಇಕ್ಬಾಲ್ ಅವರ ಸೇವೆಯನ್ನು ಮತ್ತು ಅರಂತೋಡು ಪಟೇಲರಾಗಿದ್ದ ಅಹಮದ್ ಕುಂಞಿ ಹಾಜಿ, ತೆಕ್ಕಿಲ್ ಮೊಹಮ್ಮದ್ ಹಾಜಿ ಹಾಗು ಕುಟುಂಬಸ್ಥರ ಬಗ್ಗೆ ಮಾಹಿತಿ ಪಡೆದು ಕುಟುಂಬದ ಹಿರಿಯರು ಮಾಡಿದ ಧಾರ್ಮಿಕ, ಸಾಮಾಜಿಕ, ವ್ಯಾಪಾರ, ಕೃಷಿ, ಸಮಾಜ ಸೇವೆಯನ್ನು ಕೊಂಡಾಡಿದರು. ಸಂಪಾಜೆ ಆರಂತೋಡಿನ ಊರಿನ ಅಭಿವೃದ್ಧಿ, ಮಸೀದಿ, ಮದರಸ,ಶಿಕ್ಷಣ ಸಂಸ್ಥೆಯ ಬೆಳವಣಿಗೆಯ ಬಗ್ಗೆ ತೆಕ್ಕಿಲ್ ಕುಟುಂಬಸ್ಥರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಬಿ ಎಂ ಶೌಕತ್, ಫರ್ವೈಸ್, ಸಿದ್ದಿಕ್ ಕೊಕ್ಕೋ, ಜಿಲ್ಲಾ ವಖ್ಫ್ ಬೋರ್ಡ್ ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಮೊಗರ್ಪಣೆ ಉಪಸ್ಥಿತರಿದ್ದರು.