ಸಂಪಾಜೆ ಗ್ರಾ. ಪಂ. – ವಿಶೇಷ ಗ್ರಾಮ ಸಭೆ…

ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ಇದರ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರ ಆಯವ್ಯಯ ತಯಾರಿಕೆಯ ಅಂಗವಾಗಿ ವಿಶೇಷ ಗ್ರಾಮ ಸಭೆ ಸಂಜೀವಿನಿ ಕಟ್ಟಡದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು ಅಧ್ಯಕ್ಷತೆಯಲ್ಲಿ ನಡೆಯಿತು.
ತೋಟಗಾರಿಕೆ ಇಲಾಖೆಯ ಶ್ರೀಮತಿ ಪ್ರಮೀಳಾ ಅಧಿಕಾರಿಯಾಗಿ ಭಾಗವಹಿಸಿ ಮಾಹಿತಿಯನ್ನು ನೀಡಿದರು. ಬಿ.ಯಫ್. ಟಿ. ರಶ್ಮಿ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಮಾಹಿತಿಯನ್ನು ನೀಡಿದರು. ಗ್ರಾಮ ಪಂಚಾಯತ್ ಸದಸ್ಯರುಗಳಾದ ಸುಂದರಿ ಮುಂಡಡ್ಕ, ಲಿಸ್ಸಿ ಮೊನಾಲಿಸಾ, ವಿಮಲಾ ಪ್ರಸಾದ್, ಕಾರ್ಯದರ್ಶಿ ಪದ್ಮಾವತಿ, ಕ್ರಷಿ ಸಖಿ ಮೋಹಿನಿ, ಸವಿತಾ ಕಿಶೋರ್ ಉಪಸ್ಥಿತರಿದ್ದರು.