ದ. ಕ. ಜಿಲ್ಲಾ ಕಾಂಗ್ರೇಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾಗಿ ಇದ್ದುಕುಂಞ ಆಯ್ಕೆ…

ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ಇದ್ದುಕುಂಞ ಅರಂತೋಡು ಇವರನ್ನು ಜಿಲ್ಲಾ ಕಾಂಗ್ರೇಸ್ ಅಲ್ಪಸಂಖ್ಯಾತಘಟಕದ ಅಧ್ಯಕ್ಷರಾದ ಶಾಹುಲ್ ಹಮೀದ್ ಕೆ. ಕೆ. ರವರು ನೇಮಕಗೊಳಿಸಿರುತ್ತಾರೆ.
ಪ್ರದೇಶ ಕಾಂಗ್ರೇಸ್ ಸಮಿತಿ ರಾಜ್ಯ ಮಾಜಿ ಕಾರ್ಯದರ್ಶಿ ಟಿ. ಎಂ. ಶಹೀದ್ ತೆಕ್ಕಿಲ್, ಸುಳ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಪಿ. ಸಿ. ಜಯರಾಮ, ತಾಲೂಕು ಅಲ್ಪ ಸಂಖ್ಯಾತ ಕಾಂಗ್ರೇಸ್ ಘಟಕದ ಅಧ್ಯಕ್ಷ ಜಿ. ಕೆ. ಹಮೀದ್, ಕೆಪಿಸಿಸಿ ಯ ಅಲ್ಪಸಂಖ್ಯಾತರಘಟಕದ ರಾಜ್ಯ ಸಂಯೋಜಕರಾದ ತಾಜ್ ಮಹಮ್ಮದ್ ಸಂಪಾಜೆ ರವರ ಶಿಫಾರಸ್ಸುಮೇರೆಗೆ ನೇಮಕಗೊಂಡಿರುತ್ತಾರೆ. ಇವರು ಅರಂತೋಡು ಗ್ರಾಮ ಪಂಚಾಯತ್ ಸದಸ್ಯರಾಗಿ, ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ ನಿರ್ದೇಶಕರಾಗಿ ಹಾಗೂ ಹಿರಿಯ ಕಾಂಗ್ರೇಸಿಗ, ನಿಷ್ಠಾವಂತ, ಪ್ರಾಮಾಣಿಕ ಕಾರ್ಯಕರ್ತರಾಗಿ ಅರಂತೋಡು ಕಾಂಗ್ರೇಸ್ ನ ಗ್ರಾಮ ಸಮಿತಿಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ.