ಯು ಪಿ ಎಸ್ ಸಿ ಪರೀಕ್ಷೆಯಲ್ಲಿ ಉನ್ನತ ಹುದ್ದೆ ಪಡೆದ ಮೊಹಮದ್ ಅಶ್ಮಿಲ್ ಶಾಹ್ ಹುದವಿ ಯುವಕರಿಗೆ ಮಾದರಿ- ಶಾಹಿದ್ ತೆಕ್ಕಿಲ್…
ಕಾಸರಗೋಡು: ತೆಕ್ಕಿಲ್ ಸಮೀಪದ ಕುನಿಯ ಸಮೂಹ ಶಿಕ್ಷಣ ಸಂಸ್ಥೆ ಮತ್ತು ಐ ಎ ಎಸ್ ಅಕಾಡೆಮಿಯಲ್ಲಿ ವ್ಯಾಸಂಗ ಮಾಡಿ ತರಬೇತಿ ಪಡೆದು ಕೇಂದ್ರ ಲೋಕ ಸೇವಾ ಆಯೋಗದಲ್ಲಿ 382ನೇ ರಾಂಕ್ ನಲ್ಲಿ ತೇರ್ಗಡೆಯಾದ ಮೊಹಮದ್ ಅಶ್ಮಿಲ್ ಶಾಹ್ ಹುದವಿ ಅವರನ್ನು ಸಂಸ್ಥೆಯ ವತಿಯಿಂದ ಕುನಿಯ ಕ್ಯಾಂಪಸ್ ನಲ್ಲಿ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ನಡೆಯಿತು .
ಸಮಾರಂಭವನ್ನು ಉದ್ಘಾಟಿಸಿ, ಶಾಲು ಹೊದಿಸಿ ಸ್ಮರಣಿಕೆ ನೀಡಿ ಅಶ್ಮಿಲ್ ಶಾಹ್ ಹುದವಿ ಅವರನ್ನು ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಗೌರವಿಸಿ ಸನ್ಮಾನಿಸಿದರು. ನಂತರ ಮಾತನಾಡಿದ ಶಾಹಿದ್ ತೆಕ್ಕಿಲ್ ಅವರು ಅಶ್ಮಿಲ್ ಶಾಹ್ ಹುದವಿ ಈ ಮಟ್ಟಕ್ಕೆ ಬೆಳೆಯಲು ಚೆಮ್ಮಾಡ್ ದಾರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮತ್ತು ಯು ಪಿ ಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕುನಿಯ ಸಮೂಹ ಶಿಕ್ಷಣ ಸಂಸ್ಥೆ ಮತ್ತು ಐ ಎ ಎಸ್ ಅಕಾಡೆಮಿ ಅಪಾರ ಕೊಡುಗೆ ನೀಡಿದೆ ಕುನಿಯ ಇಬ್ರಾಹಿಂ ಅಹ್ಮದ್ ಅಲಿ ಹಾಜಿ ಅವರ ದೂರದೃಷ್ಟಿ ಕೇವಲ ಎರಡು ವರ್ಷದಲ್ಲಿ ಫಲ ನೀಡಿದೆ. ಮುಂದೆ ಈ ಸಂಸ್ಥೆಯ ಮುಖಾಂತರ ಹಲವರು ಉನ್ನತ ಹುದ್ದೆಗೆ ಏರಲಿದ್ದು ಶಾಹ್ ಹುದವಿ ಯುವಕರಿಗೆ ಮತ್ತು ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ ಇಚ್ಛೆಯಂತೆ ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್ )ದೊರೆತಲ್ಲಿ ಮುಂದೆ ಪ್ರಪಂಚದ ನಾನಾ ಭಾಗದಲ್ಲಿ ಕೆಲಸ ಮಾಡುವ ಸೌಭಾಗ್ಯ ದೊರಕಲಿದೆ. ತಪ್ಪಿದಲ್ಲಿ ಐ ಎ ಎಸ್ ಆಗಿ ದೇಶದ ನಾನಾ ಭಾಗದಲ್ಲಿ ಕೆಲಸ ಮಾಡಲು ಅವಕಾಶ ದೊರೆಯಲಿದೆ. ಈ ಸಂದರ್ಭಗಳಲ್ಲಿ ಬಡವರ ಮತ್ತು ತುಳಿತಕ್ಕೆ ಒಳಗಾದವರ ಬಗ್ಗೆ ಅಪಾರ ಕಾಳಜಿ ವಹಿಸಿ ಎಂದು ಕಿವಿಮಾತು ಹೇಳಿ ಅವರ ಕುಟುಂಬಕ್ಕೆ ಅಧ್ಯಾಪಕರಿಗೆ ಮತ್ತು ಕಾಸರಗೋಡು ಕುನಿಯದಲ್ಲಿ ಐ ಎ ಎಸ್ ಅಕಾಡೆಮಿ ಮತ್ತು ಬೃಹತ್ ಸಮೂಹ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಕರ್ನಾಟಕದ ಕರಾವಳಿ ಮತ್ತು ಕೊಡಗು ಜಿಲ್ಲೆಯ ಜನರಿಗೆ ಸಹಕಾರಿಯಾಗಿದ್ದು ಪ್ರಪಂಚದ ಭೂಪಟದಲ್ಲಿ ಕುನಿಯವನ್ನು ಪರಿಚಯಿಸಿದ ಕುನಿಯ ಇಬ್ರಾಹಿಂ ಅಹಮದ್ ಅಲಿ ಹಾಜಿ ಅವರನ್ನು ಅಭಿನಂದಿಸಿದರು. ಸಮಾರಂಭದಲ್ಲಿ ಕಣ್ಣೂರು ವಿಶ್ವ ವಿಧ್ಯಾನಿಲಯದ ವಿಶ್ರಾಂತ ಉಪ ಕುಲಪತಿ ಕುನಿಯ ಸಂಸ್ಥೆಯ ಸಲಹೆಗಾರ ಡಾಕ್ಟರ್ ಖಾದರ್ ಮಾಂಘಾಡ್ ಅಧ್ಯಕ್ಷತೆ ವಹಿಸಿದರು. ಶಾಸಕರಾದ ಸಿ ಎಚ್ ಕುಂಜಂಬು, ಎ ಕೆ ಎಂ ಅಶ್ರಫ್ ,ಬಿಹಾರದ ಮುಜಾಪುರ ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಬುಲ್ಲಾ ಅನ್ಸಾರಿ ಐ ಪಿ ಎಸ್ ,ಕಾಸರಗೋಡು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಶಿವಂ ಐ ಪಿ ಎಸ್ ,ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಾಬು ಅಬ್ರಹಾಂ,ಕಾಸರಗೋಡ ಬ್ಲಾಕ್ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ಲ ಕುನ್ಹಿ,ಪೆರಿಯ ಪಂಚಾಯತ್ ಅಧ್ಯಕ್ಷೆ ಡಾಕ್ಟರ್ ಸಬಿತ ,ಪಳ್ಳಿಕ್ಕೆರೆ ಪಂಚಾಯತ್ ಅಧ್ಯಕ್ಷೆ ಶೋಭನ ,ಡಾಕ್ಟರ್ ಸಂತೋಷ್ ,ಸುದೀಪ್ ಮೊದಲಾದವರು ಉಪಸ್ಥಿತರಿದರು ಶಿಬಿಲಿ ಶಹಾದತಿ ಅವರು ಕುನಿಯ ಐ ಎ ಎಸ್ ಅಕಾಡೆಮಿ ಮತ್ತು ಶಿಕ್ಷಣ ಸಂಸ್ಥೆಯ ಬಗ್ಗೆ ವಿವರಿಸಿದರು ಡಾಕ್ಟರ್ ಲಕ್ಷ್ಮಿ ಭಾಯಿ ಸ್ವಾಗತಿಸಿ ಅಜ್ಮಲ್ ವಂದಿಸಿದರು ನಂತರ ಎರಡು ಸಾವಿರರಷ್ಟು ವಿದ್ಯಾರ್ಥಿಗಳು ಸಾರ್ವಜನಿಕರು ಸಾಧಕರ ಜೊತೆ ಸಾಮೂಹಿಕ ಇಫ್ತಾರ್ ಕೂಟದಲ್ಲಿ ಭಾಗವಹಿಸಿದರು.




