ಮಕ್ಕಳ ದಿನಾಚರಣೆಯ ಪ್ರಯುಕ್ತ ಸುಳ್ಯ ಗಾಂಧಿನಗರ ಅಂಗನವಾಡಿಯ ನೂತನ ಕೊಠಡಿ ಉದ್ಘಾಟನೆ…

ಸುಮಾರು ರೂ. 50 ಸಾವಿರ ಸ್ವಂತ ಹಣ ವ್ಯಯಿಸಿ, ಕೊಠಡಿ ನಿರ್ಮಾಣ ಮಾಡಿರುವ ನ. ಪಂ. ಸದಸ್ಯ ಶ್ರೀ ಶರೀಫ್ ಕಂಠಿ...

ಸುಳ್ಯ: ಮಕ್ಕಳ ದಿನಾಚರಣೆ ಪ್ರಯುಕ್ತ, ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ , ಅಂಗನವಾಡಿ ನೂತನ ಕೊಠಡಿ ಉದ್ಘಾಟನೆ, ಹಾಗೂ ಮಕ್ಕಳ ದಿನಾಚರಣೆಯನ್ನು ನೆರವೇರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಡಿಪಿಒ ಶ್ರೀಮತಿ ಶೈಲಜ ವಹಿಸಿದ್ದರು. ಈ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ಕೂಡ ನಡೆಯಿತು.
ಸುಮಾರು ಒಂದು ಲಕ್ಷದ ಐವತ್ತು ಸಾವಿರ ವೆಚ್ಚದಲ್ಲಿ ನಿರ್ಮಾಣವಾದ ನೂತನ ಕೊಠಡಿಯನ್ನು ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಯವರು ಉದ್ಘಾಟಿಸಿ, ಶುಭ ಹಾರೈಸಿದರು.
ನಗರ ಪಂಚಾಯತ್ ಸದಸ್ಯರಾದ ಶ್ರೀ ಶರೀಫ್ ಕಂಠಿ ಅವರು ಮಾತನಾಡಿ, ನೂತನ ಕೊಠಡಿಗೆ ಇಲಾಖೆ ವತಿಯಿಂದ, ಒಂದು ಲಕ್ಷ ಅನುದಾನ ಬಂದಿದ್ದು, ಎಸ್ಟಿಮೇಟ್ ಗಿಂತ ಅಧಿಕ ವಿಸ್ತೀರ್ಣ ನಿರ್ಮಾಣ ಮಾಡಲಾಗಿದೆ. ಈ ನೂತನ ಕೊಠಡಿಗೆ ಹೆಚ್ಚುವರಿಯಾಗಿ ಸುಮಾರು ಐವತ್ತು ಸಾವಿರದಷ್ಟು ಖರ್ಚನ್ನು ನಾನು ಭರಿಸಿರುತ್ತೇನೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೂತನ ಅಧಿಕಾರಿಯವರಾದ ಶ್ರೀಮತಿ ಶೈಲಜ ರವರನ್ನು ನ ಪಂ ಸದಸ್ಯ ಶರೀಫ್ ಕಂಠಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ರೊ ಜೆ.ಕೆ.ರೈ, ನಗರ ಪಂಚಾಯತ್ ನ ಸದಸ್ಯ ರಿಯಾಜ್, ಮುಸ್ತಾಫ ಕೆ ಎಂ , ಶುಭಶ್ರೀ ಮಹಿಳಾ ಮಂಡಲ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಅಂಗನವಾಡಿ ಅಧ್ಯಾಪಕರು, ಪುಟಾಣಿ ಮಕ್ಕಳು ಹಾಗೂ ಪೋಷಕರು ಹಾಜರಿದ್ದರು.

whatsapp image 2023 11 22 at 3.59.51 pm

whatsapp image 2023 11 22 at 3.59.51 pm (1)

whatsapp image 2023 11 22 at 3.59.52 pm (1)

Sponsors

Related Articles

Back to top button