ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆ ಗೂನಡ್ಕ 18 ನೇ ವರ್ಷದ ಶಾಲಾ ವಾರ್ಷಿಕೋತ್ಸವ…

ಸುಳ್ಯ: ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆ ಗೂನಡ್ಕ ಇದರ 18 ನೇ ವರ್ಷದ ಶಾಲಾ ವಾರ್ಷಿಕೋತ್ಸವ ಬ್ಲೋಸಮ್ 2024 ಸಮಾರಂಭವು ಜ.7 ರಂದು ತೆಕ್ಕಿಲ್ ಶಾಲಾ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪಾರ್ಮೇಡ್ ಗ್ರೂಪ್ ನ ಹಿರಿಯ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಡಾ| ಉಮ್ಮರ್ ಬೀಜದ ಕಟ್ಟೆ ಮಾತನಾಡಿ ಮಕ್ಕಳು ವಿದ್ಯಾಭಾಸದ ಕಡೆ ಗಮನ ಹರಿಸಿ ಓದುವ ಅಭ್ಯಾಸವನ್ನು ಬಾಲ್ಯದಲ್ಲಿಯೇ ರೂಡಿಸಿಕೊಳ್ಳಬೇಕು. ಇಂದಿನ ಮಕ್ಕಳೇ ಮುಂದಿನ ಜನಾಂಗ. ಮಕ್ಕಳು ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆದು ಸ್ವಾವಲಂಬಿಗಳಾಗಬೇಕೆಂದರು.
ಬಹುಮಾನವನ್ನು ವಿತರಿಸಿ ಮಾತನಾಡಿದ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿಮೇಲು ತೆಕ್ಕಿಲ್ ಶಾಲೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವುದರಿಂದ ಶಾಲೆ ಇಂದು ಈ ಎತ್ತರಕ್ಕೆ ಬೆಳೆದು ನಿಂತಿದೆ ಎಂದರು. ನಿವೃತ್ತ ಮುಖ್ಯೋಪಾಧ್ಯಾಯ ದಾಮೋದರ್ ಮಾಸ್ತರ್ ಮಾತನಾಡಿ ಈ ಸಂಸ್ಥೆಯನ್ನು ನಾನು ಹತ್ತಿರದಿಂದ ಬಲ್ಲವನಾಗಿದ್ದೇನೆ. ಸಂಸ್ಥೆಯು ಕಷ್ಟ ನಷ್ಠಗಳ ನಡೆವೆಯೂ ಬೆಳೆದು ನಿಂತಿದೆ. ಪೋಷಕರೇ ಸಂಸ್ಥೆಯ ಆಸ್ತಿ. ಕಾಲಕಾಲಕ್ಕೆ ಶಾಲಾ ಶುಲ್ಕವನ್ನು ಭರಿಸಿ ಸಂಸ್ಥೆಯ ಬೆಳವಣಿಗೆಯಲ್ಲಿ ಕೈ ಜೋಡಿಸಬೇಕೆಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಮಾತನಾಡಿ ಇಲ್ಲಿ ಕಲಿತ ಅನೇಕ ವಿಧ್ಯಾರ್ಥಿಗಳು ದೇಶ ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ, ಪ್ರತಿಭಾವಂತರಿದ್ದಾರೆ. ಅದು ನನಗೆ ತೃಪ್ತಿ ತಂದಿದೆ. ಸಂಸ್ಥೆಗೆ ಬೇಕಾದ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲು ಬದ್ಧನಾಗಿರುತ್ತೇನೆ. ತಮ್ಮೆಲ್ಲರ ಸಹಕಾರ ಅತೀ ಅಗತ್ಯ ಎಂದರು.
ಶಾಲಾ ಮುಖ್ಯೋಪಾಧ್ಯಾಯ ಸಂಪತ್ ವರದಿ ವಾಚಿಸಿದರು. ಮುಖ್ಯ ಅತಿಥಿಗಳಾಗಿ ಹಾಜಿ ಇಬ್ರಾಹಿಂ ಸೀ ಫುಡ್, ಸುಳ್ಯ ಬ್ಲಾಕ್ ಯೂತ್ ಕಾಂಗ್ರೇಸ್ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ, ಅನ್ಸಾರಿಯ ಯತೀಮ್ ಖಾನಾ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹನೀಫ್ ಎಸ್.ಕೆ ಸಂಪಾಜೆ, ಮಾಜಿ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ಸದಸ್ಯ ಜಗದೀಶ್ ರೈ ಕಲ್ಲುಗುಂಡಿ, ತೆಕ್ಕಿಲ್ ಶಾಲಾಭಿವ್ರದ್ಧಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನಕರ ಸಣ್ಣಮನೆ, ಮಾಜಿ ಭೂನ್ಯಾಯ ಮಂಡಳಿ ಸದಸ್ಯ ಹಾಜಿ ಪಿ.ಎ ಉಮ್ಮರ್, ತೆಕ್ಕಿಲ್ ಪ್ರತಿಷ್ಠಾನ ಕಾರ್ಯದರ್ಶಿ ಅಶ್ರಫ್ ಗುಂಡಿ, ಕೋಶಾಧಿಕಾರಿ ಟಿ.ಎಂ ಜಾವೇದ್ ತೆಕ್ಕಿಲ್, ತೆಕ್ಕಿಲ್ ಆಡಳಿತ ಮಂಡಳಿಯ ಗೌರವಾಧ್ಯಕ್ಷ ತಾಜ್ ಮೊಹಮ್ಮದ್ ಸಂಪಾಜೆ, ಅಧ್ಯಕ್ಷ ಉನೈಸ್ ಪೆರಾಜೆ ನ್ಯಾಯವಾದಿ ಮೂಸಾ ಪೈಬಂಚ್ಚಾಲ್, ಸಿದ್ಧಿಕ್ ಕೊಕ್ಕೊ, ಸಾಜೀದ್ ಐ.ಜಿ ಗೂನಡ್ಕ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ತೆಕ್ಕಿಲ್ ಶಾಲೆಯಲ್ಲಿ ಸೇವೆ ಸಲ್ಲಿಸಿ ವಿವಿಧ ಕಾರಣಗಳಿಂದ ತೆರಳಿದ ಶಿಕ್ಷಕಿಯರಾದ ವಾಣಿ, ಉಷಲತಾ, ಧನ್ಯಶ್ರೀ, ಲೋಕೇಶ್ವರಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಮಹನೀಯರಾದ ಡಾ| ಉಮ್ಮರ್ ಬೀಜದ ಕಟ್ಟೆ, ಹಮೀದ್ ಕುತ್ತಮೊಟ್ಟೆ, ಲತೀಫ್ ಹರ್ಲಡ್ಕ ಹಾಗೂ ನಿವ್ರತ್ತ ಶಿಕ್ಷಕ ದಾಮೋದರ ಮಾಸ್ತರ್ ಇವರುಗಳನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಸಾಧಿಕ್ ಮಾಸ್ತರ್ ಕಲ್ಲುಗುಂಡಿ ಸ್ವಾಗತಿಸಿ, ಉನೈಸ್ ಪೆರಾಜೆ ವಂದಿಸಿದರು. ಶಿಕ್ಷಕಿಯರಾದ ಸೌಮ್ಯ ಹಾಗೂ ಸುಭಾಶಿನಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿಧ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು. ಶ್ರೀಧರ್ ಅಡೂರು ಇವರಿಂದ ಮ್ಯಾಜಿಕ್ ಶೋ, ಕ್ಯಾಲಿಕಟ್ ನ ಪ್ರಖ್ಯಾತ ಪಟ್ರು ಮಾಲ್ ತಂಡದವರಿಂದ ಮ್ಯೂಸಿಕಲ್ ಫೆಸ್ಟ್ ರಸಮಂಜರಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಯಶಸ್ವಿಗೆ ಅಧ್ಯಾಪಕ ವೃಂದ , ಸಿಬ್ಬಂದಿಗಳು, ಆಡಳಿತ ಮಂಡಳಿ ಸದಸ್ಯರು, ವಿಧ್ಯಾರ್ಥಿಗಳು, ಪೋಷಕರು ಸಹಕರಿಸಿದರು.

whatsapp image 2024 01 08 at 5.28.25 pm

whatsapp image 2024 01 08 at 5.26.54 pm

whatsapp image 2024 01 08 at 5.25.45 pm

whatsapp image 2024 01 08 at 5.27.34 pm

Sponsors

Related Articles

Back to top button