‘ಮಧುಪ್ರಪಂಚ’ ತ್ರೈಮಾಸಿಕ ಪತ್ರಿಕೆ ಬಿಡುಗಡೆ…

ಬೆಳ್ತಂಗಡಿ: ದ.ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘದ ‘ಮಧುಪ್ರಪಂಚ’ ತ್ರೈಮಾಸಿಕ ಪತ್ರಿಕೆಯನ್ನು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಪತ್ರಿಕೆಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಭಾರತ ಸರಕಾರದ ರಾಜ್ಯಸಭಾ ಸದಸ್ಯತ್ವ ಪಡೆದ ಹಿನ್ನಲೆಯಲ್ಲಿ ವಿಶೇಷ ಲೇಖನದ ಮೂಲಕ ಪತ್ರಿಕೆಯ ವತಿಯಿಂದ ಗೌರವ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ , ಸಂಪಾದಕ ಜಯಾನಂದ ಪೆರಾಜೆ, ನಿರ್ದೇಶಕರಾದ ಜಿ.ಪಿ.ಶ್ಯಾಂ ಭಟ್, ಡಿ.ತನಿಯಪ್ಪ ನೇರಳೆಕಟ್ಟೆ, ಶಿವಾನಂದ , ವ್ಯವಸ್ಥಾಪನಾ ನಿರ್ದೇಶಕ ತಿಮ್ಮಯ್ಯ ಪಿ, ವಿಜಯಕುಮಾರ್ ಪಿ.ಆರ್. ಧರ್ಮಸ್ಥಳ ಉಪಸ್ಥಿತರಿದ್ದರು.

Sponsors

Related Articles

Back to top button