ಕಲ್ಲುಗುಂಡಿಯಲ್ಲಿ ದ್ವಿಚಕ್ರ ವಾಹನಗಳ ಅಪಘಾತ- ಓರ್ವ ಸಾವು…

ಸುಳ್ಯ : ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಕಲ್ಲುಗುಂಡಿ ಚಟ್ಟೆಕಲ್ಲಿನಲ್ಲಿ ಇಂದು ಸಂಭವಿಸಿದೆ. ಮೃತ ವ್ಯಕ್ತಿಯನ್ನು ಕೊಯನಾಡು ಬಂಡಡ್ಕದ ವಿಷ್ಣು ಪ್ರಸಾದ್ (40) ಎಂದು ಗುರುತಿಸಲಾಗಿದೆ.
ಎ.20 ರಂದು ಬೆಳಗ್ಗೆ ಕೊಯನಾಡಿನಿಂದ ಕಲ್ಲುಗುಂಡಿ ಪೇಟೆಗೆ ದಿನಸಿ ಸಾಮಾಗ್ರಿಗೆ ಬಂದಿದ್ದ ವಿಷ್ಣು ಪ್ರಸಾದರು ದಿನಸಿ ಖರೀದಿಸಿ ತನ್ನ ಆಕ್ಟಿವಾದಲ್ಲಿ ವಾಪಸ್ ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಸಂಪಾಜೆಯ ಗೌತಮ್ ಎಂಬವರ ಬೈಕ್ ಪರಸ್ಪರ ಢಿಕ್ಕಿಯಾಗಿದೆ, ಪರಿಣಾಮ ಎರಡೂ ದ್ವಿಚಕ್ರ ವಾಹನಗಳು ರಸ್ತೆಗೆ ಬಿದ್ದಿದ್ದು ಆಕ್ಟಿವಾದಲ್ಲಿದ್ದ ವಿಷ್ಣು ಪ್ರಸಾದ್ ರಿಗೆ ಗಂಭೀರ ಗಾಯವಾಗಿದ್ದು ಅವರನ್ನು ತಕ್ಷಣ ಸುಳ್ಯದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬೈಕ್ ಸವಾರ ಗೌತಮ್ ಅವರಿಗೂ ಗಾಯವಾಗಿದ್ದು ಅವರನ್ನು ಮಂಗಳೂರಿಗೆ ಕೊಂಡೊಯ್ಯಲಾಗಿದೆ.