ಪೇರಡ್ಕ ಉರೂಸ್ : ಸರ್ವ ಧರ್ಮ ಸಮ್ಮೇಳನ…
ಸರ್ವಧರ್ಮ ಸಮ್ಮೇಳನಗಳು ಎಲ್ಲೆಡೆ ನಡೆಯುವ ಅಗತ್ಯ ಇದೆ -ಸದಾನಂದ ಮಾವಜಿ...
ಸುಳ್ಯ: ಪ್ರಸ್ತುತ ಕಾಲಘಟ್ಟದಲ್ಲಿ ಸರ್ವಧರ್ಮ ಸಮ್ಮೇಳನಗಳು ಎಲ್ಲೆಡೆ ನಡೆಯುವ ಅಗತ್ಯ ಇದೆ ಎಂದು ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂಧ ಮಾಜಿ ಹೇಳಿದರು.
ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಸರ್ವಧರ್ಮ ಸಮ್ಮೇಳನಗಳು ನಶಿಸಿ ಹೋಗಿದೆ ಇಂದು ಇದರ ಅಗತ್ಯ ಇದೆ. ಪೇರಡ್ಕದ ಸೌಹಾರ್ಧತೆಯು ತೆಕ್ಕಿಲ್ ಕುಟುಂಬದ ಹಿರಿಯರಿಂದ ಬಳುವಳಿಯಾಗಿ ಬಂದಿದೆ. ಅವರ ಕುಟುಂಬದ ಕುಡಿ ಟಿ.ಎಂ ಶಹೀದ್ ತೆಕ್ಕಿಲ್ ರವರು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಪೇರಡ್ಕದ ದರ್ಗಾ ಶರಿಫ್ ಕಾರ್ಣಿಕ ಇರುವ ಕ್ಷೇತ್ರ ಅದರ ಅನುಭವ ನನಗೂ ಆಗಿದೆ ಎಂದು ಅವರು ಪೆಬ್ರವರಿ 02 ರಂದು ಪೇರಡ್ಕ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆದ ಇತಿಹಾಸ ಪ್ರಸಿದ್ದ ವಲಿಯುಲ್ಲಾಹಿ ದರ್ಗಾ ಶರೀಫ್ ನ ಉರೂಸ್ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸರ್ವಧರ್ಮ ಸಮ್ಮೇಳನದಲ್ಲಿ ಉದ್ಘಾಟಕರಾಗಿ ಮಾತನಾಡಿದರು.
ಎಲ್ಲಾ ಜಾತಿ ಮತ ಧರ್ಮಗಳಿಂದ ಮಾನವ ಧರ್ಮವೇ ಮೇಲು ಶಾಂತಿಯಿಂದ ನೆಲೆಸಲು ಎಲ್ಲಾ ಧರ್ಮದ ಮಧ್ಯ ಸಾಮರಸ್ಯ ಅತೀ ಅಗತ್ಯ ಅಂತಹ ನಾಡಗಿದೆ ಪೇರಡ್ಕ – ಗೂನಡ್ಕ. ಇಲ್ಲಿ ಶಹೀದ್ ತೆಕ್ಕಿಲ್, ಹಮೀದ್ ಗೂನಡ್ಕ ರಂತಹ ನಾಯಕತ್ವ ಊರಿನ ಸೌಹಾರ್ದತೆಗೆ ಕೊಂಡಿಯಾಗಿದೆ ಎಂದು ಎಸ್.ಕೆ.ಎಸ್.ಎಸ್.ಎಫ್ ನ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಇಕ್ಬಾಲ್ ಬಾಳಿಲ ದಿಕ್ಸೂಚಿ ಭಾಷಣ ಮಾಡಿದರು.
ಸುಳ್ಯ ಕೆ.ವಿ.ಜಿ ಆಯುರ್ವೇದಿಕ್ ಕಾಲೇಜಿನ ಪ್ರಾಂಶುಪಾಲ ಡಾ| ಲೀಲಾಧರ್ ಮಾತನಾಡಿ ಪೇರಡ್ಕ-ಗೂನಡ್ಕ ಸೌಹಾರ್ಧತೆಗೆ ಹೆಸರುವಾಸಿಯಾಗಿದೆ. ಇಲ್ಲಿನ ಯುವಕರು ಸಮಾಜಮುಖಿಯಾಗಿ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆಂದರು. ಕೆ.ವಿ.ಜಿ ಆಯುರ್ವೇದಿಕ್ ಕಾಲೇಜಿನ ಪ್ರೊಫೆಸರ್ ಹಾಗೂ ಅರಂತೊಡು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಡಾ| ಲಕ್ಷ್ಮೀಶ ಮಾತನಾಡಿ ಆರೋಗ್ಯವಂತ ಮನುಷ್ಯನಿಗೆ ಶಾರೀರಿಕವಾಗಿ, ಮಾನಸಿಕವಾಗಿ, ರಾಜಕೀಯವಾಗಿ ಉತ್ತಮ ಸ್ವಾಸ್ಥ್ಯ ಸಮಾಜಕ್ಕಾಗಿ ಸರ್ವಧರ್ಮ ಸಮ್ಮೇಳನಗಳು ಅತೀ ಅಗತ್ಯ ಎಂದರು. ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ| ಉಮ್ಮರ್ ಬೀಜದಕಟ್ಟೆ ಮಾತನಾಡಿ ಅಧರ್ಮದ ಬಗ್ಗೆ ಸಂಘರ್ಷಗಳು ನಡೆಯುತ್ತಿದೆ. ನಾವು ನಮ್ಮ ಧರ್ಮವನ್ನು ಅರಿತುಕೊಂಡು ಪ್ರೀತಿಯಿಂದ ಬಾಳಬೇಕೆಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಪೇರಡ್ಕ ಮುಹಿದ್ದೀನ್ ಜುಮಾ ಮಸೀದಿ ಅಧ್ಯಕ್ಷರು ಹಾಗೂ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಮಾತನಾಡಿ, ಪೇರಡ್ಕವು ಸೌಹಾರ್ಧತೆಯ ಕೇಂದ್ರವಾಗಿದೆ ಇಲ್ಲಿನ ಜನ ಶಾಂತಿ ಸೌಹಾರ್ಧತೆಯಿಂದ ಪರಸ್ಪರ ಸಹಾಯ ಸಹಕಾರದಿಂದ ಒಂದೇ ತಾಯಿಯ ಮಕ್ಕಳಂತೆ ಜೀವಿಸುತ್ತಿರುವುದು ಪೇರಡ್ಕ ಮಣ್ಣಿನ ಗುಣ. ನಮ್ಮ ಪೂರ್ವಜರಾದ ತೆಕ್ಕಿಲ್ ಮೊಹಮದ್ ಹಾಜಿ ಜೊತೆಯಲ್ಲಿ ಉಳುವಾರು ಸಣ್ಣಕ್ಕ ಕೂಸಕ್ಕ, ವಿ ಪಿ ಕೊಯಿಲೋ, ಗೂನಡ್ಕ ಗುಡ್ಡಪ್ಪ ಗೌಡ,ಗೂನಡ್ಕ ಶಿವಣ್ಣ ಪಟೇಲರು ಸೇಟ್ಯಡ್ಕ ಮಾಧವ ಭಟ್ ಇಲ್ಲಿಂದಲೇ ಸೌಹಾರ್ದ ಪರಂಪರೆಗೆ ನಾಂದಿ ಹಾಕಿದರು. ಅದಕ್ಕೆ ಶತಮಾನಗಳ ಇತಿಹಾಸ ಇದೆ ಮತ್ತು ಅದು ಸಂಪಾಜೆ ಗ್ರಾಮದಿಂದ ಕರ್ನಾಟಕ ಹಾಗು ಕೇರಳ ರಾಜ್ಯಕ್ಕೆ ವ್ಯಾಪಿಸಿದೆ ಎಂದರು.
ಸ್ಥಳೀಯ ಖತೀಬರಾದ ಬಹು| ನಈಮ್ ಫೈಝಿ ಅಲ್ ಮುಹ್ ಬರಿ ದುವಾ ನೆರವೇರಿಸಿದರು. ಸಂಪಾಜೆ ಚರ್ಚ್ ನ ಆಡಳಿತ ಮಂಡಳಿ ಸದಸ್ಯ ಲುಕಾಸ್ ಹಾಗೂ ನ್ಯಾಯವಾದಿ ರಶೀದ್ ಗೂನಡ್ಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಿ.ಆರ್.ಪಿ ಸಬ್ ಇನ್ ಸ್ಪೆಕ್ಟರ್ ಅನ್ವಾರ್ ಪಿ.ಎಂ ತೆಕ್ಕಿಲ್, ಸಂಪಾಜೆ ವರ್ತಕರ ಸಂಘದ ಅಧ್ಯಕ್ಷ ಚಕ್ರಪಾಣಿ, ಮೀಫ್ ಉಪಾಧ್ಯಕ್ಷ ಕೆ.ಎಂ ಮುಸ್ತಫ, ಸುಳ್ಯ ತಾಲೂಕು ಅಲ್ಪಸಂಖ್ಯಾತರ ಸಹಕಾರಿ ಸಂಘದ ಅಧ್ಯಕ್ಷ ಮೊಹಮ್ಮದ್ ಇಕ್ಬಾಲ್ ಎಲಿಮಲೆ, ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯೋಪಾದ್ಯಾಯ ಸಂಪತ್, ಕಲ್ಲುಗುಂಡಿ ಜುಮಾ ಮಸೀದಿ ಅಧ್ಯಕ್ಷ ಆಲಿಹಾಜಿ, ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಸಂತೋಷ್ ಕ್ರಾಸ್ತ, ನಿವೃತ್ತ ಯೋಧರಾದ ವಸಂತ ಪೇರಡ್ಕ, ಪಧ್ಮನಾಭ ಪೇರಡ್ಕ, ಕಲ್ಲುಗುಂಡಿ ಮಹಾವಿಷ್ಣು ಮೂರ್ತಿ ದೈವಸ್ಥಾನದ ಅಧ್ಯಕ್ಷ ಜಗದೀಶ್ ರೈ, ನಗರ ಪಂಚಾಯತ್ ನಾಮ ನಿರ್ದೇಶನ ಸದಸ್ಯ ಸಿದ್ಧೀಕ್ ಕೊಕ್ಕೊ,ಸದಸ್ಯರಾದ ಕೆ.ಎಸ್ ಉಮ್ಮರ್, ಶರೀಫ್ ಕಂಠಿ, ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯ ಮುಜೀಬ್, ಮಂಗಳೂರು ಸಹಾಯಕ ಇನ್ ಸ್ಪೆಕ್ಟರ್ ಸಾಧಿಕ್ ಪೇರಡ್ಕ, ಗೌರವಾಧ್ಯಕ್ಷ ಆರಿಫ್ ತೆಕ್ಕಿಲ್, ನ್ಯಾಯವಾದಿ ಸಲೀಂ ಗೂನಡ್ಕ , ಇಬ್ರಾಹಿಂ ಹಾಜಿ ಕತ್ತರ್, ಅಶ್ರಫ್ ಗುಂಡಿ, ಮೋಹನ ಪೇರಡ್ಕ, ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್.ಕೆ ಹನೀಫ್, ಹೆಚ್.ಎ ಅಶ್ರಫ್ ಸೆಂಟ್ಯಾರ್, ರವೂಫ್ ಪೊಲೀಸ್ ಮುನೀರ್ ದಾರಾಮಿ ಮೊದಲಾದವರು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ವಸಂತ ಗೌಡ ಪೇರಡ್ಕ, ಪಧ್ಮನಾಭ ಪೇರಡ್ಕ, ಸಿ ಆರ್ ಪಿ ಎಫ್ ಸಬ್ ಇನ್ಸ್ಪೆಕ್ಟರ್ ಪಿ ಎಂ ಅನ್ವರ್ ತೆಕ್ಕಿಲ್, ಹಾಗೂ ಹಜ್ ಯಾತ್ರೆ ಕೈಗೊಳ್ಳಲಿರುವ ಹೆಚ್.ಎ ಅಶ್ರಫ್ ಸೆಂಟ್ಯಾರ್ ಮತ್ತು ಸುಪುತ್ರ , ಅಬ್ಬಾಸ್ ದೊಡ್ಡಡ್ಕ ಮತ್ತು ಮಗನಾದ ಮಿದ್ಲಜ್ ಹುದವಿ ಮಕ್ಕಳ ಕಲ್ಯಾಣ ಸಮಿತಿಯ ನ್ಯಾಯವಾದಿ ಮತ್ತು ನೋಟರಿ ಅಬೂಬಕ್ಕರ್ ಅಡ್ಕಾರ್ ಅವರನ್ನು ಮಸೀದಿ ಆಡಳಿತ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಮೊಹಿದ್ದೀನ್ ರಿಫಾಯಿ ಎಸೋಸಿಯೇಶನ್ ಇದರ ಅಧ್ಯಕ್ಷ ಜಿ.ಕೆ ಹಮಿದ್ ಗೂನಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.