ಶ್ರೀ ಮಹಾಕಾಳಿ ನಾಲ್ಕೈತ್ತಾಯ ದೈವಸ್ಥಾನ – ಪ್ರತಿಷ್ಠಾಪನ ವರ್ಧಂತ್ಯುತ್ಸವ…

ಬಂಟ್ವಾಳ: ಶ್ರೀ ಮಹಾಕಾಳಿ ನಾಲ್ಕೈತ್ತಾಯ ದೈವಸ್ಥಾನ ಮಹಾಕಾಳಿಪಡ್ಪು ಸಜೀಪಮುನ್ನೂರು ಇದರ ಪ್ರತಿಷ್ಠಾಪನ ವರ್ಧಂತ್ಯುತ್ಸವದ ಅಂಗವಾಗಿ ಮಾ.8 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ವಿದ್ಯುಕ್ತವಾಗಿ ವರ್ಷಂಪ್ರತಿಯಂತೆ ಜರಗಲಿದೆ.
ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ಪುಣ್ಯಾಹ, ಪಂಚಗವ್ಯ, ದ್ವಾದಶ ನಾಳಿಕೇರ ಗಣಯಾಗ ,ದುರ್ಗಾಹೋಮ, ಮಹಾಪೂಜೆ ಅನ್ನದಾನ, ವಿವಿಧ ಸಂತ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ರಾತ್ರಿ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ, ಶ್ರೀ ಸಪ್ತಶತಿ ಪಾರಾಯಣ, ರಂಗಪೂಜೆ, ಕಾರ್ತಿಕ ಪೂಜೆ, ಮಹಾಪೂಜೆ ಕಲ್ಪೋಕ್ತ ಪೂಜೆ, ಪ್ರಸಾದ ವಿತರಣೆ, ಅನ್ನದಾನ ಬ್ರಹ್ಮಕಲಶೋತ್ಸವದ ದಿನಾಚರಣೆಯ ಅಂಗವಾಗಿ ನಡೆಯಲಿದೆ.