ಕೇಸರಿ ಫ್ರೆಂಡ್ಸ್ ವೀರಕಂಬ ವತಿಯಿಂದ ಸತ್ಯನಾರಾಯಣ ಪೂಜೆ…

ಬಂಟ್ವಾಳ: ಕೇಸರಿ ಫ್ರೆಂಡ್ಸ್ ವೀರಕಂಬ ಇದರ ವತಿಯಿಂದ ಶ್ರೀ ಉಮಾಮಹೇಶ್ವರ ಸನ್ನಿಧಾನ ಮಜಿ ಛತ್ರ ವೀರಕಂಬ ಇಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ 2020ನೇ ಸಾಲಿನ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಶ್ರೀಮತಿ ಸಂಗೀತ ಶರ್ಮ ಪಿ ಜಿ ಇವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಉಮಾಮಹೇಶ್ವರ ಸನ್ನಿಧಾನದ ಮುಖ್ಯಸ್ಥರಾದ ಶ್ರೀ ತಿರುಮಲ ಕುಮಾರ್ ಮಜಿ,ಕೇಸರಿ ಫ್ರೆಂಡ್ಸ್ ಗೌರವಾಧ್ಯಕ್ಷ ಜಯಶಂಕರ್, ಕೆಎಂಎಫ್ ವಿಸ್ತರಣಾಧಿಕಾರಿ ಜಗದೀಶ್ ಎ ,ಮಜಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸಂಜೀವ ಮೂಲ್ಯ , ಕೇಸರಿ ಫ್ರೆಂಡ್ಸ್ ಇದರ ಅಧ್ಯಕ್ಷ ರಮೇಶ್ ಕುಲಾಲ್ ಮೈರ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button