ಟಿ.ಎಂ ಶಹೀದ್ ತೆಕ್ಕಿಲ್ ಅಭಿನಂದನಾ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ…

ಶಹೀದ್ ಅವರಿಗೆ ಇನ್ನಷ್ಟು ಉತ್ತಮ ಸ್ಥಾನ ದೊರೆಯುವ ಸೌಭಾಗ್ಯ ಒದಗಲಿ- ಡಾ|ಶಿಶಿಲ...

ಸುಳ್ಯ: ಸಾಮಾಜಿಕ ಮತ್ತು ರಾಜಕೀಯ, ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದ ಕ್ರಿಯಾಶೀಲ ನಾಯಕ ಟಿ.ಎಂ ಶಹೀದ್ ರವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ಜುಲೈ 6 ರಂದು ಸುಳ್ಯದ ಬಂಟರ ಭವನದಲ್ಲಿ ನಡೆಯಲಿದೆ.
ಈ ಅಭಿನಂದನಾ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ ನಡೆಯಿತು.ಆಮಂತ್ರಣ ಪತ್ರ ಬಿಡುಗಡೆಯನ್ನು ಖ್ಯಾತ ಸಾಹಿತಿ ಡಾ.ಪ್ರಭಾಕರ ಶಿಶಿಲರವರು ಬಿಡುಗಡೆಗೊಳಿಸಿ ಮಾತನಾಡಿ ಟಿ.ಎಂ ಶಹೀದ್ ವಿದ್ಯಾರ್ಥಿಯಾಗಿರುವಾಗಲೇ ಬಹಳ ಚುರುಕು ಮತ್ತು ಪ್ರತಿಭಾವಂತನಾಗಿದ್ದನು. ನಂತರ ಸಾಮಾಜಿಕ ಮತ್ತು ರಾಜಕೀಯ ಹೀಗೆ ಸಮಾಜಕ್ಕೆ ಉಪಹಾರವಾಗುವ ಎಲ್ಲಾ ಕ್ಷೇತ್ರದಲ್ಲಿ ದುಡಿದು ಒರ್ವ ಉತ್ತಮ ಜನನಾಯಕನಾಗಿದ್ದಾನೆ.
ಶಹೀದ್ ರಾಜಕೀಯ ಕ್ಷೇತ್ರದಲ್ಲಿ ಬಹಳ ಎತ್ತರಕ್ಕೆ ಬೆಳೆದಿದ್ದಾನೆ ಇನ್ನು ಉತ್ತಮ ಸ್ಥಾನ ದೊರೆಕಲಿ, ಎಂಎಲ್ಸಿ ಯಾಗಲಿ ಎಂದವರು ಹಾರೈಸಿದರು.
ಅರೆಭಾಷೆ ಸಂಸ್ಕ್ರತಿ ಅಕಾಡೆಮಿ ಅಧ್ಯಕ್ಷ ಹಾಗೂ ಅಭಿನಂದನಾ ಸಮಿತಿ ಅಧ್ಯಕ್ಷರಾದ ಸದಾನಂದ ಮಾವಾಜಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಂಚಾಲಕರಾದ ಕೆ.ಟಿ ವಿಶ್ವನಾಥ್, ನಗರ ಪಂಚಾಯತ್ ಮಾಜಿ ಸದಸ್ಯ ಕೆ.ಎಂ ಮುಸ್ತಫ, ಎ.ಪಿ.ಎಮ್.ಸಿ ಮಾಜಿ ಅಧ್ಯಕ್ಷ ಪರಶುರಾಮ ಚಿಲ್ತಡ್ಕ, ಅಲ್ಪಸಂಖ್ಯಾತರ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ, ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ, ಸಿದ್ಧಿಕ್ ಕೊಕ್ಕೊ, ರಾಜು ಪಂಡಿತ್, ನ್ಯಾಯವಾದಿಗಳಾದ ಬಾಲಚಂದ್ರ ರೈ, ಮೊಹಮ್ಮದ್ ಪವಾಝ್, ಸಾಮಾಜಿಕ ಮುಖಂಡ ಅಶ್ರಫ್ ಗುಂಡಿ, ರಂಜಿತ್ ರೈ ಮೇನಾಲ, ಪತ್ರಕರ್ತ ಶರೀಫ್ ಜಟ್ಟಿಪಳ್ಳ, ಅಬ್ಬಾಸ್ ಮಂಡೆಕೋಲು ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂಧರ್ಭದಲ್ಲಿ ಡಾ| ಪ್ರಭಾಕರ ಶಿಶಿಲರವರನ್ನು ಅಭಿನಂದನಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.

whatsapp image 2024 06 25 at 10.00.38 am

whatsapp image 2024 06 25 at 10.00.40 am

Sponsors

Related Articles

Back to top button