ಟಿ.ಎಂ ಶಹೀದ್ ತೆಕ್ಕಿಲ್ ಅಭಿನಂದನಾ ಕಾರ್ಯಕ್ರಮದ ಸಿದ್ಧತಾ ಸಭೆ…

ಜುಲೈ 6 ರಂದು ಅಭಿನಂದನಾ ಕಾರ್ಯಕ್ರಮ...

ಸುಳ್ಯ: ಕಳೆದ ನಾಲ್ಕು ದಶಕಗಳ ಕಾಲ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಸಹಕಾರಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಕ್ರೀಯಾಶೀಲರಾಗಿರುವ ಮತ್ತು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಾಹಿದ್ ತೆಕ್ಕಿಲ್ ರವರ ಅಭಿನಂಧನಾ ಕಾರ್ಯಕ್ರಮ ಜುಲೈ 6 ರಂದು ಸುಳ್ಯದ ಕೇರ್ಪಳ ಬಂಟರ ಭವನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಕೇರಳ ಮತ್ತು ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಮುಖಂಡರುಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಪೂರ್ವ ಸಿದ್ಧತೆ ಬಗ್ಗೆ ಅಭಿನಂಧನಾ ಸಮಿತಿ ಸಭೆಯು ಸುಳ್ಯದ ಉಡುಪಿ ಗಾರ್ಡನ್ ಸಭಾಂಗಣದಲ್ಲಿ ಅಭಿನಂದನಾ ಸಮಿತಿಯ ಅಧ್ಯಕ್ಷರು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿಯವರ ಅಧ್ಯಕ್ಷತೆಯಲ್ಲಿ ಜೂ 19 ರಂದು ನಡೆಯಿತು.
ಸಮಿತಿ ಸಂಚಾಲಕರಾದ ಕೆ.ಟಿ ವಿಶ್ವನಾಥ್ ಕಾರ್ಯಕ್ರಮದ ತಯಾರಿ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಅತಿಥಿಗಳನ್ನು ಕರೆತರುವ ವ್ಯವಸ್ಥೆ, ತಾಲೂಕಿನಲ್ಲಿ ಆಮಂತ್ರಣ ಪತ್ರ ತಲುಪಿಸುವ ವ್ಯವಸ್ಥೆ, ಊಟದ ವ್ಯವಸ್ಥೆ, ಆಸನದ ವ್ಯವಸ್ಥೆಗಳ ಬಗ್ಗೆ ಉಪಸಮಿತಿಗಳನ್ನು ರಚಿಸಲಾಯಿತು.
ಸ್ವಾಗತ ಸಮಿತಿ ಸಂಚಾಲಕರಾಗಿ ಮಹಮ್ಮದ್ ಇಕ್ಬಾಲ್ ಎಲಿಮಲೆ, ಕಾರ್ಯಕ್ರಮ ಸಂಯೋಜನಾ ಮತ್ತು ಸನ್ಮಾನ ಸಮಿತಿ ಸಂಚಾಲಕರಾಗಿ ಕೆ.ಎಂ ಮುಸ್ತಫಾ, ಆಮಂತ್ರಣ ಮತ್ತು ಪ್ರಚಾರ ಸಮಿತಿ ಸಂಚಾಲಕರಾಗಿ ಜಿ.ಕೆ.ಹಮೀದ್ ಗೂನಡ್ಕ, ಆಹಾರ ಮತ್ತು ಅತಿಥಿ ಆತಿಥ್ಯ ಸಮಿತಿ ಸಂಚಾಲಕರಾಗಿ ರಾಧಾಕೃಷ್ಣ ಬೊಳ್ಳೂರು, ಮಾಧ್ಯಮ ಸಮಿತಿ ಸಂಚಾಲಕರಾಗಿ ಶರೀಫ್ ಜಟ್ಟಿಪಳ್ಳ, ಮೈಕ, ಬೆಳಕು, ವೇದಿಕೆ ಸಮಿತಿ ಸಂಚಾಲಕರಾಗಿ ಆರ್.ಬಿ ಬಶೀರ್ ಹಾಗು ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ರಾಧಾಕೃಷ್ಣ ಬೊಳ್ಳೂರು , ಮಹಮ್ಮದ್ ಇಕ್ಬಾಲ್ ಎಲಿಮಲೆ, ಹಾಜಿ ಕೆ.ಎಂ ಮುಸ್ತಫಾ, ಹಾಜಿ ಇಬ್ರಾಹಿಂ ಕತ್ತರ್, ಹಮೀದ್ ಕುತ್ತಮೊಟ್ಟೆ, ಕೆ.ಎಸ್. ಉಮ್ಮರ್, ಅಶ್ರಫ್ ಗುಂಡಿ, ಸಿದ್ಧಿಕ್ ಕೊಕ್ಕೊ, ಜಿ.ಕೆ ಹಮೀದ್ ಗೂನಡ್ಕ, ತಾಜ್ ಮೊಹಮ್ಮದ್ ಸಂಪಾಜೆ, ಸಲಿಂ ಪೇರಂಗೋಡಿ, ಎಸ್. ಕೆ.ಹನೀಫ್, ಬಶೀರ್ ಕೆ.ಎಂ, ಹಸೈನಾರ್ ಜಯನಗರ, ಶರೀಫ್ ಜಟ್ಟಿಪಳ್ಳ, ಅಶ್ರಫ್ ಕಲ್ಲುಮುಟ್ಲು, ಆರ್ .ಬಿ ಬಶೀರ್, ಶಮೀಯುಲ್ಲಾ, ಅಬ್ದುಲ್ ರಜಾಕ್ ಸಂಗಂ, ಅಬ್ಬಾಸ್ ಮಂಡೆಕೋಲು, ಎ. ಹನೀಫ್, ಇಭ್ರಾಹಿಂ ಹಳೆಗೇಟು ಮೊದಲಾದವರು ಉಪಸ್ಥಿತರಿದ್ದರು.

whatsapp image 2024 06 24 at 4.20.52 pm

Sponsors

Related Articles

Back to top button