ಪ್ರಭಾಕರ ಬಿ ಕೆ ಅವರಿಗೆ ಡಾಕ್ಟರೇಟ್ ಪದವಿ…

ಮಂಗಳೂರು: ನಗರದ ಏ. ಜೆ. ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಇನ್ಫಾರ್ಮಶನ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಪ್ರಭಾಕರ ಬಿ ಕೆ ಅವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ನೀಡಿದೆ.
ಬೆಂಗಳೂರಿನ ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಸಂಶೋಧನ ಕೇಂದ್ರದಲ್ಲಿ “ ಓಪ್ಟಿಮೈಸಿಂಗ್ ದಿ ಪರ್ಫಾರ್ಮೆನ್ಸ್ ಆಫ್ ಡೈನಾಮಿಕ್ ಲೋಡ್ ಬ್ಯಾಲೆನ್ಸಿಂಗ್ ಇನ್ ಕ್ಲೌಡ್ ಕಂಪ್ಯೂಟಿಂಗ್ ಎನ್ವಿರಾನ್ಮೆಂಟ್ ” ಎಂಬ ಸಂಶೋಧನಾ ಪ್ರಬಂಧವನ್ನು ಅವರು ಮಂಡಿಸಿದ್ದರು. ಡಾ.ಚಂದ್ರಕಾಂತ್ ನೈಕೋಡಿ ಮತ್ತು ಡಾ. ಸುರೇಶ್ ಎಲ್ ಮಾರ್ಗದರ್ಶನ ಮಾಡಿದ್ದರು. ಇವರು ವಿಟ್ಲ ಸಮೀಪ ಮಂಗಳ ಪದವಿನಲ್ಲಿ ವಾಸವಾಗಿರುವ ಮಾಜಿ ಸೈನಿಕ ಕೂಸಪ್ಪ ಶೆಟ್ಟಿ ಮತ್ತು ನಿವೃತ ಶಿಕ್ಷಕಿ ಉಮಾವತಿ ಶೆಟ್ಟಿ ದಂಪತಿಯ ಪುತ್ರ.

Related Articles

Back to top button